ಮೂಡುಬಿದರೆ: ಅಳಿವಿನಂಚಿನಲ್ಲಿರುವ ನಮ್ಮ ಕೃಷಿ ಜೊತೆ ನಾಡಿನ ಗ್ರಾಮೀಣ ಕ್ರೀಡಾಕೂಟಗಳು ಮತ್ತು ಸಂಸ್ಕ್ರತಿ ಪರಂಪರೆಗಳು ಇಂದು ಅವನತಿ ಹೊಂದುತ್ತಿದೆ. ಇಂದಿನ ಯುವ ಜನತೆ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಪಾಲಡ್ಕ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಮಜಲು ಗದ್ದೆಯಲ್ಲಿ ಪಾಲಡ್ಕ ಫ್ರೆಂಡ್ಸ್‍ನ ಆಶ್ರಯದಲ್ಲಿ ನಡೆದ 2 ವರ್ಷದ ಕೆಸರ್ಡೊಂಜಿ ದಿನ ಕಾರ್ಯಕ್ರವನ್ನು ಉದ್ಘಾಟಿಸಿ ಅಶೀರ್ವಚನ ನೀಡಿ ಮಾತನಾಡಿದರು.
ದ.ಕ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪಾಲಡ್ಕ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಗೌರವಾಧ್ಯಕ್ಷ ಕುಂಗೂರು ಶಿವಪ್ರಸಾದ್ ಆಚಾರ್ಯ, ಪುತ್ತಿಗೆ ವ್ಯವಸಾಯ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪಾಲಡ್ಕ ಗ್ರಾ.ಪಂ ಅಧ್ಯಕ್ಷೆ ಸವಿತ ಸುರೇಶ್ ಪೂಜಾರಿ, ಮಂಗಳೂರು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಹಿರಿಯರಾದ ಉಮೇಶ್ ಪೂಜಾರಿ, ಶ್ರೀಧರ ಶೆಟ್ಟಿ,ಭೋಜ ಪೂಜಾರಿ,ಪಾಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಉದ್ಯಮಿ ತಾರನಾಥ ಆಚಾರ್ಯ sಸತೀಶ್ ಪೂಜಾರಿ ಮತ್ತಿತರರಿದ್ದರು.
ಸುರೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಡಂದಲೆ ಪಾಲಡ್ಕ ಗ್ರಾಮದ ಪುರುಷರ ಕಬಡ್ಡಿ, ವಾಲಿಬಾಲ್, ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆ,ಹಗ್ಗ ಜಗ್ಗಾಟ,ನಿ ಶೋಧನೆಯಲ್ಲಿ ಮಕ್ಕಳು ,ಮಹಿಳೆಯರು ಹಗ್ಗ ಜಗ್ಗಾಟ,ತ್ರೋ ಬಾಲ್ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *