ಶಬರಿ ಮಲೆಯಲ್ಲಿ ನೆಲೆಗೊಂಡ ಅಯ್ಯಪ್ಪನ ದರುಶನ ಪಡೆಯುವ ಭಕ್ತರು ಭಕ್ತಿಯ ಪರಾಕಾಷ್ಠೆಯಿಂದ ದಿವ್ಯ ಅನುಭವವನ್ನು ಪಡೆದು ಪುನೀತರಾಗುತ್ತಾರೆ. ಮಾಲೆ ಧರಿಸಿ ಪಾದರಕ್ಷೆ ಧರಿಸದೆ, ದಿನಕ್ಕೆ ಒಂದು ಹೊತ್ತು ಅನ್ನಾಹಾರ ಸೇವಿಸಿ, ಕಪ್ಪು ಬಣ್ಣದ ವಸ್ತ್ರ ಧರಿಸಿ ಒಂದು ಮಂಡಲ(41 ದಿನಗಳು) ವೃತಾಚರಣೆ ಕೈಗೊಂಡು ಅಯ್ಯಪ್ಪನ ಸನ್ನಿಧಿಗೆ ತೆರಳಿ ಇರುಮುಡಿ ಸಮರ್ಪಿಸಿ ಬರುವ ಭಕ್ತರು ಒಂದು ರೀತಿಯ ಅಲೌಕಿಕ ದಿವ್ಯ ಅನುಭವವನ್ನು ಪಡೆಯುತ್ತಾರೆ.
ಅಯ್ಯಪ್ಪ ದೇವಸ್ಥಾನವು ಸಮುದ್ರ ತೀರದಿಂದ 914 ಮೀಟರ್ ಎತ್ತರದಲ್ಲಿ ಕೇರಳದ ಪೆರಿಯಾರ್ ಹುಲಿಧಾಮದ ಭಾಗವಾದ ಗೊಂಡಾರಣ್ಯದ ಮಧ್ಯ ಭಾಗದಲ್ಲಿದೆ. ಇದು ಪತ್ತಿನಂತಿಟ್ಟ ಜಿಲ್ಲೆಯ ರಾನ್ನಿ ತಾಲೂಕಿನ ಪರಿನಾಡು ಗ್ರಾಮಗಳನ್ನೊಳಗೊಂಡಿದೆ. ಪಂಪಾ ನದಿಯವರೆಗೆ ವಾಹನಗಳಲ್ಲಿ ಬರುವ ಭಕ್ತರು ಅಲ್ಲಿಂದ ಶಬರಿಮಲೆ ಸನ್ನಿಧಿಗೆ ತಲುಪಲು 4 ಕಿ.ಮೀ. ಕಡಿದಾದ ಗುಡ್ಡದ ದಾರಿಯನ್ನು ಏರಬೇಕಾಗುತ್ತದೆ.
ಶಬರಿಮಲೆ ದೇವಾಲಯವು ಭಕ್ತ ದರ್ಶನಕ್ಕಾಗಿ ಉತ್ಸವ ಕಾಲ ಹೊರತು ಪ್ರತಿ ಮಲಯಾಳ ತಿಂಗಳ ಮೊದಲ 5 ದಿನಗಳಲ್ಲಿ ತೆರೆದಿರುತ್ತದೆ. ಉತ್ಸವ ಕಾಲದಲ್ಲಿ `ಮಂಡಲ ಪೂಜೆ’ ಮತ್ತು `ಮಕರ ವಿಳಕ್ಕು’ ನಡೆಯುವ ಪುಣ್ಯ ಮುಹೂರ್ತಗಳಲ್ಲಿ ಎರಡೂವರೆ ತಿಂಗಳು ಭಕ್ತ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಉತ್ಸವ ಸಮಯವು ಆರಂಭವಾಗುವುದು ಮಯಯಾಳ ತಿಂಗಳು ವೃಶ್ಚಿಕಂ ಒಂದಕ್ಕೆ (ನವಂಬರದಲ್ಲಿ) ಮತ್ತು ಕೊನೆಗೊಳ್ಳುವುದು ಮಕರಂ ಒಂದಕ್ಕೆ (ಜನವರಿಯಲ್ಲಿ). ಅಲ್ಲದೆ ಶಬರಿಮಲೆ ದೇವಾಲಯವು ಕೇರಳದ ಪ್ರಧಾನ ಉತ್ಸವಗಳಾದ ಓಣಂ, ವಿಷು, ಹಸ್ತ ಚಿತ್ರ, ನಿರಪುತ್ತರಿ (ಮನೆತುಂಬು ಹುತ್ತರಿ) ಮತ್ತು ಪೈಂಗುಣಿ ಉತ್ತರಂ (ಉತ್ತರಾಷಾಢ) ದಿನಗಳಲ್ಲಿ ದೇವಾಲಯದ ಬಾಗಿಲು ತರೆಯುತ್ತಾರೆ. ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಮಯದಲ್ಲಿ ಲಕ್ಷಗಟ್ಟಲೆ ಅಯ್ಯಪ್ಪ ಭಕ್ತರು ಸನ್ನಿಧಿಗೆ ಬರುತ್ತಾರೆ. ಪಂಪಾನದಿಯಿಂದ ಸನ್ನಿಧಾನಕ್ಕೆ 3000 ಅಡಿ ಅಂತರವಿದೆ.
ಶಬರಿಮಲೆಯನ್ನೊಳಗೊಂಡು ಒಟ್ಟು 18 ಬೆಟ್ಟಗಳಿವೆ. ಅದರಲ್ಲಿ ನೀಲಕ್ಕಲ್, ಕಲಕೆಟ್ಟಿ ಹಾಗೂ ಕರಿಮಲೆ ಪ್ರಮುಖವಾದವುಗಳು. ಕೆಲವರು ಕರಿಮಲೆ ಮುಖಾಂತರ 18 ಕಿ.ಮೀ. ಪಾದಯಾತ್ರೆಯ ಮೂಲಕ ಕಡಿದಾದ ಗುಡ್ಡದಲ್ಲಿ ಎರಡು ದಿನಗಳ ಕಾಲ ನಿರಂತರ ಸಂಚರಿಸಿ ಶಬರಿಮಲೆಗೆ ತಲುಪುತ್ತಾರೆ. ಇನ್ನು ಕೆಲವರು ಪಂಪಾ ನದಿಯಿಂದ ನಾಲ್ಕು ಕಿ.ಮೀ. ಸಂಚರಿಸಿ ಸನ್ನಿಧಾನಕ್ಕೆ ತಲುಪುವವರಿದ್ದಾರೆ. ದೇವಸ್ಥಾನದ ಆಡಳಿತವನ್ನು ತಿರುವಂಕೂರು ದೇವಸ್ವಂ ಆಡಳಿತ ಮಂಡಳಿ ವಹಿಸುತ್ತದೆ. ಕೇರಳ ರಾಜ್ಯಕ್ಕೆ ಶಬರಿಮಲೆ ದೇವಸ್ಥಾನ ಆದಾಯ ತರುವಂತಹಾ ದೇವಸ್ಥಾನವಾಗಿದೆ.
shabarimala 1

???????????????????????????????

???????????????????????????????

shabarimala 4

???????????????????????????????

???????????????????????????????

???????????????????????????????

???????????????????????????????

???????????????????????????????

shabarimala 10

shabarimala 11

???????????????????????????????ಶಬರಿಮಲೆಯಲ್ಲಿ ನಿಂತು ದೇವಸ್ಥಾನದ ಸುತ್ತಲಿನ ವಿಹಂಗಮ ನೋಟವನ್ನು ನೋಡಿದಾಗ ನಮಗೆ ಇಡೀ ಜಗತ್ತೇ ಕಪ್ಪು ಬಣ್ಣದಿಂದ ಕೂಡಿದಂತೆ ಬಾಸವಾಗುತ್ತದೆ. ಯಾಕೆಂದರೆ ಶಬರಿಮಲೆಗೆ ಕಪ್ಪು ವಸ್ತ್ರಧಾರಿಗಳಾಗಿ ಯಾಕಾಗಿ ಬರುತ್ತಾರೋ ಅದೇ ರೀತಿ ಅಲ್ಲಿನ ಬಣ್ಣವೂ ಕಪ್ಪಾಗಿರುವಂತೆ ಭಾಸವಾಗುತ್ತದೆ. ಕಪ್ಪು ವಸ್ತ್ರ ವೈರಾಗ್ಯದ ಸಂಕೇತವಾಗಿರುವುದರಿಂದ ಇದನ್ನು ಧರಿಸಿ ಅಯ್ಯಪ್ಪನ ದರುಶನ ಮಾಡಬೇಕೆನ್ನುವುದು ಪ್ರತೀತಿ. ಮುಖ್ಯವಾಗಿ ಅಲ್ಲಿನ ವನಚರಗಳೂ ಸಹ ಕಪ್ಪು ಬಣ್ಣದಿಂದ ಕೂಡಿದೆ. ಕಪ್ಪು ಬಣ್ಣದ ಕೋತಿ, ಕಪ್ಪು ಬಣ್ಣದ ಜೇಡ, ಕಪ್ಪು ಬಣ್ಣದ ಸಹಸ್ರಪದಿ ಇವೆಲ್ಲಾ ಇಲ್ಲಿನ ವಿಶೇಷತೆಗಳಾಗಿದೆ. ಅಲ್ಲದೆ ಇಲ್ಲಿನ ಕ್ರಿಮಿ ಕೀಟಗಳು ಸಹ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಪಾಕೃತಿಕವಾಗಿ ನೋಡಿದರೂ ಸಹ ಶಬರಿಮಲೆಗೂ ಕಪ್ಪು ಬಣ್ಣಕ್ಕೂ ಸಂಬಂಧವಿರುವಂತೆ ಕಂಡುಬರುತ್ತದೆ. ಶಬರಿಮಲೆಗೂ ಕಪ್ಪು ಬಣ್ಣಕ್ಕೂ ಯಾವುದಾದರೂ ಸಂಬಂಧವಿರುವ ಸಾಧ್ಯವಿದ್ದು, ಒಂದು ರೀತಿಯ ಕೌತುಕವನ್ನು ಸೃಷ್ಟಿಸಿದೆ.
ಶಬರಿಮಲೆಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಶಬರಿಮಲೆ ಸನ್ನಿಧಾನವನ್ನು ತೆರಳುವವರು ಅಚ್ಚನಕೋವಿಲ್, ಅರ್ಯನಕಾವು, ಕುಲತುಪಾಶ, ಎರುಮೆಲಿಯಲ್ಲಿರುವ ಶ್ರೀ ಧರ್ಮಶಾಸ್ತ ದೇವಸ್ಥಾನ, ಕಲಕೆತ್ತಿಯಲ್ಲಿರುವ ಶಿವ-ಪಾರ್ವತಿ ದೇವಸ್ಥಾನವನ್ನು ಸಂದರ್ಶಿಸಬಹುದು.
ಸನ್ನಿಧಾನದ ಸಮೀಪ ಪಂಪಾ ನದಿಯಿದೆ. ಇದರ ಸಮೀಪ ವಿನಯಕರ್ ದೇವಸ್ಥಾನ, ಮಾಲಿಕಪುರತಮ್ಮನ್ ದೇವಸ್ಥಾನ, ಪಂದಲ ಕ್ಷೇತ್ರ, ಇದರ ಮಧ್ಯದಲ್ಲಿ ಅಯ್ಯಪ್ಪ ಸನ್ನಿಧಾನ ಕಂಡುಬರುತ್ತದೆ. ಶ್ರೀ ಸನ್ನಿಧಾನ ಬಂಗಾರದಿಂದ ಕೂಡಿದ್ದು ಧ್ವಜಸ್ತಂಭವೂ ಸಹ ಚಿನ್ನದಿಂದಲೇ ಕೂಡಿದೆ. ಶಬರಿಮಲೆ ಸಂದರ್ಶಿಸಿದ ಬಳಿಕ ಭಸ್ಮಕುಳಂನಲ್ಲಿ ಮಿಂದು ಬರುತ್ತಾರೆ.
ಪ್ರತೀ ನವೆಂಬರ್ 15ರಿಂದ ಮಂಡಲಪೂಜೆ ಆರಂಭಗೊಂಡ ಬಳಿಕ ಎರಡು ತಿಂಗಳ ಕಾಲ ಭಕ್ತರು ಮಾಲೆ ಧರಿಸಿಕೊಂಡು ಬರುತ್ತಾರೆ. ಜನವರಿ 14ರಂದು ಮಕರಜ್ಯೋತಿ ಆದ ಬಳಿಕ ಜನವರಿ 20ರಂದು ಮಕರವಿಳಕ್ಕು ಕೊನೆಗೊಳ್ಳುತ್ತದೆ.
ಪ್ರತಿದಿನ 16.5 ಗಂಟೆಗಳ ಕಾಲ ಅಯ್ಯಪ್ಪ ಸ್ವಾಮಿಯ ದರ್ಶನ ಸಾರ್ವಜನಿಕರಿಗೆ ಸಿಗಲಿದೆ. ಬೆಳಗ್ಗೆ 4 ಗಂಟೆಗೆ ಆರಂಭವಾಗುವ ದರ್ಶನ ಸಮಯ ಮಧ್ಯಾಹ್ನ 1.30ಕ್ಕೆ ಉಚ್ಛಪೂಜೆಗೆ ಬಾಗಿಲು ಮುಚ್ಚಲಿದೆ. ನಂತರ 4 ಗಂಟೆಗೆ ಬಾಗಿಲು ತೆರೆದರೆ 11 ಗಂಟೆಗೆ ಅಥಳಪೂಜೆ ನಂತರ ದರ್ಶನ ಮುಕ್ತಾಯವಾಗಲಿದೆ.
ಸುಮಾರು 2000ಕ್ಕೂ ಅಧಿಕ ಪೆÇಲೀಸ್ ಸಿಬ್ಬಂದಿ, ಕೊಯಮತ್ತೂರಿನ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ದೇಗುಲದ ಸುತ್ತ ಸದಾ ಸನ್ನದ್ಧರಾಗಿರುತ್ತಾರೆ, ಇದಲ್ಲದೆ, ಲೋಹ ಶೋಧಕ, ಬ್ಯಾಗ್ ಸ್ಕ್ಯಾನರ್ ಮುಂತಾದ ಉಪಕರಣಗಳನ್ನು ಬಳಸಲಾಗುತ್ತದೆ.
ಅಪ್ಪಂ, ಅರವಣ ಪಾಯಸ, ಪಂಚಾಮೃತ ಇಲ್ಲಿನ ಪ್ರಮುಖ ಪ್ರಸಾದ. ಇರುಮುಡಿಯಲ್ಲಿ ಹೊತ್ತುಕೊಂಡು ಬಂದ ತುಪ್ಪವನ್ನು ಅಯ್ಯಪ್ಪನ ಮೂರ್ತಿಗೆ ಅಭಿಷೇಕ ಮಾಡಿ ಅದನ್ನು ಭಕ್ತರಿಗೆ ಸಮರ್ಪಿಸಲಾಗುತ್ತದೆ. ತುಪ್ಪವನ್ನು ತೆಂಗಿನಕಾಯಿಯೊಳಗಡೆ ಸಂಗ್ರಹಿಸಿ ಅದನ್ನು ಸನ್ನಿಧಾನಕ್ಕೆ ತಂದು ಬಳಿಕ ಅಯ್ಯಪ್ಪನಿಗೆ ಅಭಿಷೇಕ ಮಾಡಲಾಗುತ್ತದೆ. ಇದಕ್ಕೆ ಇರುಮುಡಿ ಎನ್ನುತ್ತಾರೆ.
ಕೆಲವು ಅಶಕ್ತ ಭಕ್ತರು ಸನ್ನಿಧಾನಕ್ಕೆ ಸಂದರ್ಶಿಸಲಾಗದಿದ್ದರೆ ಡೋಲಿಯ ಸಹಾಯ ಪಡೆಯಬಹುದು. ನಾಲ್ಕು ಮಂದಿ ಕಟ್ಟುಮಸ್ತಿನ ಆಳುಗಳು ಡೋಲಿ ಹೊತ್ತುಕೊಂಡು ಭಕ್ತರನ್ನು ದೇವಳದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹಿಂತಿರುಗಿ ತರುತ್ತಾರೆ. ಭಕ್ತರು ಅನಾರೋಗ್ಯ ಪೀಡಿತರಾದರೆ ಚಿಕಿತ್ಸೆ ಕೊಡುವ ಸವಲಭ್ಯವೂ ಸನ್ನಿಧಾನದಲ್ಲಿ ಲಭ್ಯವಿದೆ.

ವ್ಯಾವಹಾರಿಕ ಕ್ಷೇತ್ರವನ್ನಾಗಿಸಿದ ಕೇರಳ ಸರಕಾರ:
ಭಕ್ತರಿಗೆ ಅನುಕೂಲವಾಗು ನಿಟ್ಟಿನಲ್ಲಿ ಕೇರಳ ಸರಕಾರ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆರೋಗ್ಯ ಸಮಸ್ಯೆ ಬಂದರೆ ಉಚಿತ ವೈದ್ಯಕೀಯ ಸೌಲಭ್ಯವೂ ಸಿಗುತ್ತದೆ. ಆದರೆ ಬೇಸರದ ಸಂಗತಿ ಎಂದರೆ ಒಂದು ಕಾಲದಲ್ಲಿ ನೈಸರ್ಗಿಕ ಮರಗಿಡಗಳಿಂದ ಕಂಗೊಳಿಸುತ್ತಿದ್ದ ಶಬರಿಮಲೆಯಲ್ಲಿ ಇಂದು ಸಿಮೆಂಟ್‍ಕಟ್ಟಡಗಳು ಕಂಡುಬರುತ್ತಿದೆ.
ಅಲ್ಲದೆ ಧಾರ್ಮಿಕ ಕ್ಷೇತ್ರವಾಗಬೇಕಾಗಿದ್ದ ಶಬರಿಮಲೆಯನ್ನು ಕೇರಳ ಸರಕಾರ ವ್ಯಾವಹಾರಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದೆ. ಪ್ರತಿಯೊಂದನ್ನೂ ಹಣದಲ್ಲೇ ಅಳೆಯುವ ಹಾಗೂ ಶಬರಿಮಲೆಗೆ ಸಂದರ್ಶನ ನಡೆಸುವ ಭಕ್ತರನ್ನು ಮಂಡಳಿ ಕಡೆಗಣಿಸುತ್ತಿದೆ ಎಂದು ಆರೋಪಿಸುವ ಭಕ್ತರು ಬೇಸರ ವ್ಯಕ್ತಪಡಿಸುತ್ತಾರೆ. ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಪ್ರದೇಶವು ಸರಿಯಾದ ನಿಯಂತ್ರಣವಿಲ್ಲದೆ ಯಾವಾಗ ಏನಾಗಬಹುದು ಎಂಬ ಆತಂಕದಲ್ಲಿ ಕಳೆಯುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತರ ಸಂಖ್ಯೆ ಜಾಸ್ತಿ ಇದ್ದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಹೊರರಾಜ್ಯಗಳಿಂದ ಬರುವ ಭಕ್ತರನ್ನು ನಿಯಂತ್ರಿಸಲು ಸ್ವತಹ ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ.

ಶಬರಿ ಮಲೆ ಕ್ಷೇತ್ರವನ್ನು ಶುಚಿಯಾಗಿಡಿ ಎಂಬ ಸೂಚನಾ ಫಲಕಗಳು ಅಲ್ಲಲ್ಲಿದ್ದರೂ ಭಕ್ತರು ಮಾತ್ರ ಕ್ಷೇತ್ರವನ್ನು ಅಶುಚಿ ಮಾಡಿಯೇ ತೆರಳುತ್ತಾರೆ. ಪಂಪಾ ನದಿಯ ಬಳಿ ಇರುವ ಶೌಚಾಲಯಗಳನ್ನು ಕೆಲವೊಮ್ಮೆ ಮುಚ್ಚಿರುವುದರಿಂದ ಭಕ್ತರು ಪಂಪಾಕ್ಷೇತ್ರದಲ್ಲಿ ಸ್ನಾನಮಾಡುವ ಸಂದರ್ಭದಲ್ಲಿ ಅದರಲ್ಲೇ ಮಲಮೂತ್ರ ವಿಸರ್ಜಿಸಿ ಅಶುಚಿ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಪಂಪಾಕ್ಷೇತ್ರದಲ್ಲಿ ಮಿಂದು ಶುದ್ಧರಾಗಿ ಸನ್ನಿಧಾನಕ್ಕೆ ಬರಬೇಕಾಗಿರುವ ಭಕ್ತರು ಪಂಪಾಕ್ಷೇತ್ರದ ಅಶುದ್ಧ ನೀರಿನಿಂದಾಗಿ ಅಶುದ್ಧರಾಗಬೇಕಾಗುತ್ತದೆ. ಅಲ್ಲದೆ ಪಂಪಾನದಿಯಲ್ಲಿ ಸಾಬೂನು ಹಾಕಿ ಸ್ನಾನ ಮಾಡಬಾರದೆಂಬ ನಿಯಮವಿದ್ದರೂ ಕೆಲವರು ಸಾಬೂನು ಉಪಯೋಗಿಸಿ ನದಿಯ ಪಾವಿತ್ರ್ಯತೆಯನ್ನು ಹಾಳು ಮಾಡುವ ಭಕ್ತರೂ ಅನೇಕರಿದ್ದಾರೆ. ಭಕ್ತರ ದಟ್ಟನೆ ಜಾಸ್ತಿ ಇರುವುದರಿಂದ ಇದನ್ನೆಲ್ಲಾ ನಿಯಂತ್ರಿಸಲು ಸಿಬ್ಬಂದಿಗೆ ಸಾಧ್ಯವಾಗುವುದಿಲ್ಲ.
ಜನದಟ್ಟನೆ ಜಾಸ್ತಿಇರುವ ಸಮಯ ಸನ್ನಿಧಾನದಲ್ಲಿ ಒಂದೇ ಸಮನೆ ನೂಕುನುಗ್ಗಲು ಇರುವುದರಿಂದ ಇರುಮುಡಿ ಹೊತ್ತುಕೊಂಡು ಬರುವ ನಿಶಕ್ತ ಭಕ್ತರಿಗೆ ತೊಂದರೆಯಾಗುವುದು ಕಂಡುಬರುತ್ತದೆ. ಒಂದೇ ಸಮನೆ ನುಗ್ಗುವ ಭಕ್ತರನ್ನು ಪೊಲೀಸರು ನಿಯಂತ್ರಿಸಲಾಗದೆ ಕೈಚೆಲ್ಲಬೇಕಾಗುತ್ತದೆ. ಶಬರಿಮಲೆಯಲ್ಲಿ ನೂಕನುಗ್ಗಲಿನಿಂದಾಗಿ ನಿತ್ಯ ಸಮಸ್ಯೆ ತಲೆದೋರುತ್ತಲೇ ಇರುತ್ತದೆ.
ಸರತಿ ಸಾಲಿನಲ್ಲಿ ಬರುವ ಭಕ್ತರು ಮುಂಗಡ ಟಿಕೆಟ್ ಹಣಕೊಟ್ಟರೆ ಅವರಿಗೆ ಬೇರೆಯದೇ ಆದ ಸರತಿ ಸಾಲನ್ನು ಕಲ್ಪಿಸಿ ಅವರಿಗೆ ಸನ್ನಿಧಾನಕ್ಕೆಬೇಗ ತಲುಪುವಂತೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕ್ರಮಕ್ಕೆ ಹಲವು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಯ್ಯಪ್ಪ ಕ್ಷೇತ್ರ ಇನ್ನೂ ಸುಧಾರಿಸಿಕೊಳ್ಳಬೇಕು. ಬರುವ ಭಕ್ತರಿಗೆ ಗೌರವ ಕೊಟ್ಟು ಅವರನ್ನು ಆದರದಿಂದ ಸ್ವಾಗತಿಸುವ ಹಾಗೂ ಅವರಿಗೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಟಿಡಿಪಿ ಮಾಡುವುದು ಅವಶ್ಯವಿರುತ್ತದೆ.

ಅಯ್ಯಪ್ಪ ವೃತಾಚರಣೆಯ ಸಂದರ್ಭ ಟೋಲ್‍ಗೇಟ್ ದಂಧೆ ಜಿಗಿತುಕೊಳ್ಳಲಾರಂಭಿಸುತ್ತದೆ. ಟೋಲ್‍ಗೆಟ್ ಬೆಲೆಯ ಮೂರುಪಟ್ಟು ಹಣವನ್ನು ವಸೂಲಿ ಮಾಡುವುದು ಕಂಡುಬರುತ್ತದೆ. ಈ ಅನುಭವ ಅನೇಕ ಭಕ್ತರಿಗೆ ಆಗಿದೆ. ರಶೀದಿಯಲ್ಲಿ ಸಣ್ಣಮೊತ್ತ ನಮೂದಿಸಿದರೂ ಅದು ಇದು ಎಂದು ವಸೂಲಿಬಾಜಿಗಿಳಿಯುವ ಸಿಬ್ಬಂದಿ ಕೊನೆಗೆ ಅದಕ್ಕಿಂದಲೂ ಮೂರು ಪಟ್ಟು ಹಣವನ್ನು ವಸೂಲಿ ಮಾಡಿಕೊಂಡು ಹಣ ಮಾಡುವ ದಂಧೆಯಲ್ಲಿ ನಿರತವಾಗಿದೆ. ಅಲ್ಲದೆ ಕೇರಳದ ಗಡಿ ಪ್ರವೇಶಿಸಿದ ಬಳಿಕವೂ ಟೋಲ್‍ಗೇಟ್‍ನಲ್ಲಿ ಅಕ್ರಮವಾಗಿ ಹಲವು ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ. ಮುಖ್ಯವಾಗಿ ಅಯ್ಯಪ್ಪ ವೃತಧಾರಿಗಳೇ ಅವರ ಟಾರ್ಗೆಟ್ ಆಗಿರುವುದು ಇಲ್ಲಿ ಕಂಡುಬರುತ್ತಿರುವ ಸತ್ಯ.

ಶಿಕ್ಷಾರ್ಹ ಅಪರಾಧ!
ಪಂಪಾನದಿಯಲ್ಲಿ ತಮ್ಮ ಕಪ್ಪುಬಣ್ಣದ ವಸ್ತ್ರವನ್ನು ಬಿಡಬೇಕು ಎಂಬ ನಂಬಿಕೆಯಿಂದ ಭಕ್ತರು ಝಳಕ ಮಾಡಿದ ಬಳಿಕ ಒಂದು ವಸ್ತ್ರವನ್ನು ನೀರಿನಲ್ಲೇ ಬಿಡುತ್ತಿದ್ದರು. ಇದನ್ನು ವಿಲೇವಾರಿಗೊಳಿಸುವುದು ಒಂದು ಸಮಸ್ಯೆಯಾಗುತ್ತಿತ್ತಲ್ಲದೆ, ಪಂಪಾನದಿ ಮಲಿನಗೊಳ್ಳುತ್ತಿತ್ತು. ಆದರೆ ಈ ರೀತಿ ವಸ್ತ್ರವನ್ನು ನೀರಲ್ಲೇ ಬಿಡುವುದು ಸರಿಯಲ್ಲಿ ಎಂದು ಕೇರಳದ ಹೈಕೋರ್ಟ್ ಸೂಚಿಸಿದ್ದು, ಇದರ ಆಧಾರದಲ್ಲಿ ವಸ್ತ್ರ ಬಿಡುವ ಭಕ್ತರನ್ನು ಕಾನೂನಿನಲ್ಲಿ ಕಠಿಣ ಶಿಕ್ಷೆಗೊಳಪಡಿಸಲಿದೆ.

ಗಿರೀಶ್ ಮಳಲಿ

By suddi9

Leave a Reply

Your email address will not be published. Required fields are marked *