ಬಂಟ್ವಾಳ: ರಸ್ತೆ ಅಭಿವೃದ್ದಿ ಹಾಗೂ ಕಾಂಕ್ರೀಟಿಕರಣಕ್ಕೆ ಪುರಸಭೆ ಅನುದಾನ ಮಂಜೂರುಗೊಳಿಸಿದರೂ ಒರ್ವ ವ್ಯಕ್ತಿಯ ಆಕ್ಷೇಪದಿಂದ ಬಿ.ಮೂಡ ಗ್ರಾಮದ ಕುಪ್ಪಿಲದಲ್ಲಿರುವ ಪುರಸಭೆ ಕಾಲೋನಿಯ ಸುಮಾರು 35ಕ್ಕಿಂತಲೂ ಅಧಿಕ ಮನೆಯ ನಿವಾಸಿಗಳು ರಸ್ತೆ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ರಸ್ತೆ ಅಭಿವೃದ್ದಿಗೆ ಕಳೆದ ಹಲವು ಸಮಯಗಳಿಂದ ಆಕ್ಷೇಪ ವ್ಯಕ್ತಪಡಿಸಿಕೊಂಡು ಬರುತ್ತಿರುವ ಖಾಸಗಿ ವ್ಯಕ್ತಿಯ ವಿರುದ್ದ ರೋಸಿ ಹೋದ ಸ್ಥಳೀಯ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಬಹಿರಂಗ ಪಡಿಸಿದರು.BTW_DEC3_1B

BTW_DCE3_1A

ಕುಪ್ಪಿಲದಲ್ಲಿ ಪುರಸಭೆಯಿಂದ ನೀಡಲ್ಪಟ್ಟ ನಿವೇಶನದಲ್ಲಿ ಮನೆಕಟ್ಟಿಕೊಂಡು ಕಳೆದ ಇಪ್ಪತ್ತೈದು ವರ್ಷಕಿಂತಲೂ ಅಧಿಕ ಸಮಯದಿಂದ 35 ಕುಟುಂಬದ ನಿವಾಸಿಗಳು ಇಲ್ಲಿ ವಾಸ ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ಯುವಕ ಸಂಘದ ಕಚೇರಿಯವರೆಗೆ ಈಗಾಗಲೇ ರಸ್ತೆ ಡಾಮಾರೀಕರಣಗೊಂಡಿದ್ದು ಉಳಿದ ಭಾಗ ಡಾಮಾರೀಕರಣಗೊಳಿಸಲು ಪುರಸಭೆಯಿಂದ ಅನುದಾನವೂ ಮಂಜೂರುಗೊಂಡಿದೆ. ಆದರೆ ಸ್ಥಳೀಯ ವ್ಯಕ್ತಿಯೋರ್ವರು ತನ್ನ ಖಾಸಗಿ ಜಮೀನಿನಲ್ಲಿರುವ ರಸ್ತೆಗೆ ಡಾಮಾರೀಕರಣಗೊಳಿಸಲು ಅವಕಾಶ ನೀಡದೆ ಇರುವುದರಿಂದ ಕಳೆದ ಹಲವಾರು ವರ್ಷಗಳಿಂದ ರಸ್ತೆ ಡಾಮಾರೀಕರಣಗೊಳ್ಳದೇ ಹಾಗೆಯೇ ಉಳಿದಿದೆ. ಈ ಬಗ್ಗೆ ಪುರಸಭೆಗೂ ದೂರು ನೀಡಲಾಗಿದೆ. ಸ್ಥಳೀಯ ಕೌನ್ಸಿಲರ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಾಲೋನಿಗೆ ಸಂಪರ್ಕ ಕಲ್ಪಿಸಲು ಎರಡು ಬದಿಯಿಂದ ರಸ್ತೆಗಳಿದ್ದರೂ ಇನ್ನೊಂದು ಭಾಗದಲ್ಲೂ ಈ ವ್ಯಕ್ತಿ ಡಾಮಾರೀಕರಣಕ್ಕೆ ಅವಕಾಶ ಮಾಡಿಕೊಟ್ಟರೆ ಮಾತ್ರ ತಮ್ಮ ಜಮೀನನ್ನು ಬಿಟ್ಟುಕೊಡುವುದಾಗಿ ಆಭಾಗದವರೂ ಹೇಳಿಕೊಂಡಿದ್ದಾರೆ. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ಕಾಲೋನಿ ನಿವಾಸಿಗಳು ರಸ್ತೆ ಇದ್ದರೂ ಅಭಿವೃದ್ದಿ ಕಾಣದೆ ತೊಂದರೆ ಪಡುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ರಸ್ತೆಗೆ ಯಾವುದೇ ವಾಹನಗಳು ಬಾರದೆ ಮಕ್ಕಳು, ರೋಗಿಗಳು, ಗಭರ್ಿಣಿ ಮಹಿಳೆಯರು ತೊಂದರೆ ಪಡಬೇಕಾಗಿದೆ ಎಂದು ಕಾಲೋನಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *