ಬಂಟ್ವಾಳ: ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಬಿ.ಸಿ.ರೋಡಿನ ಮುಖ್ಯವೃತ್ತವನ್ನು ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯನವರೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮನವೊಲಿಸಿ ವಿಸ್ತರಿಸುವ ಕಾಮಗಾರಿ ಕೈಗೊಂಡಿದ್ದಾರೆ.
1

2

3
ಹೊಂಡಗಳಿಂದ ತುಂಬಿದ್ದ ಮುಖ್ಯವೃತ್ತಕ್ಕೆ ಜಲ್ಲಿಕಲ್ಲು ಹಾಗೂ ಕಾಂಕ್ರಿಟ್ ಮಿಶ್ರಣವನ್ನು ಹಾಕಿ ಹೊಂಡ ಮುಚ್ಚುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ದಿನಗಳ ಹಿಂದೆ ನಡೆಸಿತ್ತು. ಸೀಮಿತ ಕೆಲಸವನ್ನು ಮುಗಿಸಿ ತೆರಳುವ ಯೋಚನೆಯಲ್ಲಿದ್ದ ಅಧಿಕಾರಿಗಳಿಗೆ ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯನವರು ಕಿರಿದಾದ ರಸ್ತೆಯಿಂದಾಗಿ ಮುಖ್ಯವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ಉಂಟಾಗುವ ಅಡೆತಡೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಅದರಂತೆ ಗುರುವಾರ ಬೆಳಿಗ್ಗೆ ಮುಖ್ಯವೃತ್ತದ ನಾಲ್ಕು ಭಾಗಗಳಲ್ಲಿಯೂ ರಸ್ತೆ ಇಕ್ಕೆಲಗಳನ್ನು ಜೆಸಿಬಿ ಮೂಲಕ ವಿಸ್ತರಿಸಿ, ಇಳಿಜಾರು ಕಂದಕಕ್ಕೆ ಮಣ್ಣು ತುಂಬಿ ರಸ್ತೆ ಅಗಲಗೊಳಿಸಿ ಎಲ್ಲಾ ದಿಕ್ಕುಗಳಿಗೂ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ ಮಾಡಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಈ ಹಿಂದೆಯೂ ಮುಖ್ಯವೃತ್ತದಲ್ಲಿ ಹೊಂಡಗಳು ನಿರ್ಮಾಣಗೊಂಡಿದ್ದಾಗ ಎಸೈ ಚಂದ್ರಶೇಖರಯ್ಯನವರೇ ಮಣ್ಣು ಹಾಕಿ ಹೊಂಡ ಮುಚ್ಚಿಸುವ ಕಾರ್ಯ ಮಾಡಿದ್ದರು.

By suddi9

Leave a Reply

Your email address will not be published. Required fields are marked *