ವಿಟ್ಲ : ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಒಕ್ಕೆತ್ತೂರು ವಿಟ್ಲ ಇಲ್ಲಿಯ ಶಾಲಾ ಪ್ರತಿಭೋತ್ಸವ 2015-16 ಕಾರ್ಯಕ್ರಮವು ಡಿ.3 ರಂದು ನಡೆಯಿತು. ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು ಹಾಗೂ ವಿವಿಧ ಸ್ಪರ್ಧೆ ಗಳ ಬಹುಮಾನವಿತರಣಾ ಕಾರ್ಯಕ್ರಮ ನಡೆಯಿತು.okketthuru

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಮಂಗೇಶ್ ಭಟ್ ವಿಟ್ಲ, ಕುಂಬ್ರ ಮರ್ಕಝಲ್ ಹುದಾ ಮಹಿಳಾ ಕಾಲೀಜಿನ ಪ್ರಾಧ್ಯಾಪಕ ಅಶ್ರಫ್ ಸಖಾಫಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಶೇತಾ ರಸ್ಕೀನ್ಹಾ, ಶಿಕ್ಷಣ ಸಂಯೋಜಕಿ ಪುಷ್ಪಾ ಹೆಚ್, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ, ಸಿ ಆರ್ ಪಿ ಶಿವರಾಮ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ ಎಂ ಅಬೂಬಕ್ಕರ್ ಮತ್ತು ನಾರಾಯಣ ನಾಯ್ಕ ಭಾಗವಹಿಸಿದ್ದರು. ಶಾಲಾ ವಾರ್ಷಿಕ ವರದಿ ಮುಖ್ಯ ಶಿಕ್ಷಕಿ ವಿ ಸುಬ್ಬಲಕ್ಷ್ಮಿ ಮಂಡಿಸಿದರು. ಶಿಕ್ಷಕಿ ಬೆನಡಿಕ್ಟಾ ಸ್ವಾಗತಿಸಿದರು. ಶಿಕ್ಷಕಿ ಮೇರಿ ಡಿ ಸೋಜಾ ವಂದಿಸಿದರು. ಶಿಕ್ಷಕ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭಾರತಿ ಸಹಕರಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *