ಮಕ್ಕಳನ್ನು ಪ್ರೋತ್ಸಾಹಿಸಿದರೆ ಅವರಲ್ಲಿನ ಪ್ರತಿಭೆಗಳು ಪ್ರಕಾಶಿತಗೊಳ್ಳುವುದು
ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್, ಗೋಕುಲದ ಯುವ ವಿಭಾಗವು ವರ್ಷಂಪ್ರತಿ ಆಯೋಜಿಸುವ ಮಕ್ಕಳ ದಿನಾಚರಣೆಯನ್ನು ಕಳೆದ ಭಾನುವಾರ ಗೋಕುಲದ ಸಭಾಗೃಹದಲ್ಲಿ ಜರಗಿಸಿತು. ಸಂಘದ ಉಪಾಧ್ಯಕ್ಷೆ ಶೈಲಿನಿ ರಾವ್, ಯುವವಿಭಾಗದ ಕಾರ್ಯಾಧ್ಯಕ್ಷ ಡಾ| ಅರುಣ್ ರಾವ್, ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಯುವವಿಭಾಗದ ಪದಾಧಿಕಾರಿಗಳು, ನೆರೆದ ಮಕ್ಕಳೊಂದಿಗೆ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Childrens 1

childrens 22 ವರ್ಷದ ಮಕ್ಕಳಿಗಾಗಿ ಆರೋಗ್ಯವಂತ ಮಗು, 2 ರಿಂದ 15 ವರ್ಷದ ಮಕ್ಕಳಿಗಾಗಿ ಚಿತ್ರಕಲೆ,ಛದ್ಮವೇಷ, ಸೃಜನಾತ್ಮಕ ಬರಹ, ರಸ ಪ್ರಶ್ನೆ, ನೃತ್ಯ ಮುಂತಾದ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಲವಾರು ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದರು. ಡಾ| ಸಹನಾ ಪೆÇೀತಿ, ಡಾ| ಅರುಣ್ ರಾವ್, ಡಾ| ಸುಮನ್ ರಾವ್, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ, ವಡಾಲ ಶಾಲೆಯ ಶಿಕ್ಷಕಶಿಕ್ಷಕಿಯರಾದ ಶಿವಯೋಗಿ ಸಣ್ಣಮನಿ, ಗೀತಾ ಬೋರ್ಕರ್, ಶಾರದಾ ನಾಯಕ್, ಕೆ.ಸಂಧ್ಯಾ, ಹಾಗೂ ಸುಧಾ ಶೆಟ್ಟಿ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು. ಯುವ ವಿಭಾಗದ ಕಾರ್ಯಕರ್ತರು ಅಚ್ಚುಕಟ್ಟಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಕ್ಕಳು ಸಂತೋಷಮಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದರು. ಸಂಘದ ಅಧ್ಯಕ್ಷಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಲ್ಪಟ್ಟಿತು. ಡಾ| ಸುರೇಶ್ ರಾವ್ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಹಾಗೂ ಈ ತಿಂಗಳ ಕೊನೆಯ ವಾರದಲ್ಲಿ ಆಶ್ರಯದಲ್ಲಿ ನಡೆಯಲಿರುವ `ಮಕ್ಕಳ ಚಳಿಗಾಲದ ಶಿಬಿರ’ ದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಎಂದು ಆಶಿಸಿದರು. ಮಕ್ಕಳನ್ನು ಪ್ರೋತ್ಸಾಹಿಸಿದರೆ ಅವರಲ್ಲಿನ ಪ್ರತಿಭೆಗಳು ಪ್ರಕಾಶಿತಗೊಳ್ಳುವುದು ಎಂದು ತಿಳಿಸಿದರು ಹಾಗೂ ಪಾಲ್ಗೊಂಡ ಸರ್ವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ಪ್ರಧಾನಿಸಿ ಪ್ರೋತ್ಸಾಹಿಸಿದರು. ಬಿಎಸ್‍ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಯುವವಿಭಾಗಧ್ಯಕ್ಷ ಡಾ| ಅರುಣ್ ರಾವ್, ಸಂಚಾಲಕ ದೀಪಕ್ ಶಿವತ್ತಾಯ ಉಪಸ್ಥಿತರಿದ್ದು ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮ ಪ್ರೋತ್ಸಾಹಕರಾದ ಕರ್ನಾಟಕ ಬ್ಯಾಂಕ್, ಹರಿದಾಸ್ ಭಟ್, ರಾಮಕೃಷ್ಣ ರಾವ್, ನಿಖಿಲ್ ರಾವ್, ವಿಮಲಾ ರಾವ್, ಮಾ| ನಿವಾನ್, ಗಿರೀಶ್ ರಾವ್ ಮುಂತಾದವರನ್ನು ಅಭಿವಂದಿಸಲಾಯಿತು.
ಯುವವಿಭಾಗದ ಸಂಚಾಲಕಿ ವಿನೋದಿನಿ ರಾವ್ ಆಭಾರ ವ್ಯಕ್ತ ಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು.

By suddi9

Leave a Reply

Your email address will not be published. Required fields are marked *