ಬಂಟ್ವಾಳ:ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಾಟಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಶೇಡಿಗುರಿ-ನಾಟಿ ಎರಡೂವರೆ ಕಿ.ಮೀ.ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ.
ನರಿಕೊಂಬು ಗ್ರಾಮದ ನಾಟಿ ಶ್ರೀ ಕೋದಂಡರಾಮ ದೇವಸ್ಥಾನವು ತ್ವರಿತವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜ.11ರಿಂದ 17ರತನಕ ನಡೆಯಲಿರುವ ಇಲ್ಲಿನ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ನೇತೃತ್ವದ ಭಕ್ತರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಈ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಚಿವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಡಾಂಬರೀಕರಣ ಕಾಮಗಾರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕಾಮಗಾರಿ ಆರಂಭಗೊಡಿತು.
ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ, ಪ್ರಮುಖರಾದ ಆಲ್ಫೋನ್ಸ್ ಮಿನೇಜಸ್, ಆನಂದ ಸಾಲ್ಯಾನ್, ರವೀಂದ್ರ ಸಪಲ್ಯ, ಆಲ್ಬರ್ಟ್ ಮಿನೇಜಸ್, ಜಿನರಾಜ ಕೋಟ್ಯಾನ್, ಭರತ್ರಾಜ್ ಏಲಬೆ, ಲಕ್ಷ್ಮಣ ಪೂಜಾರಿ, ರಮೇಶ ಬೋರುಗುಡ್ಡೆ, ಗೋವಿಂದ ಪೂಜಾರಿ, ದಿವಾಕರ ಅಬರೆಟ್ಟು, ಆಲ್ಫೋನ್ಸ್ ಮಿನೇಜಸ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ ಮತ್ತಿತರರು ಉಪಸ್ಥಿರಿದ್ದರು. ಇದೇ ವೇಳೆ ಡಾಂಬರೀಕರಣ ಕಾಮಗಾರಿ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿ ಸಚಿವ ರೈ ಅವರಿಗೆ ಅಭಿನಂದನೆ ವ್ಯಕ್ತಪಡಿಸಿದರು.
—