ಬಂಟ್ವಾಳ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಡೆದ ಈದ್ಮಿಲಾದ್ ಹಬ್ಬವನ್ನು ಫರಂಗಿಪೇಟೆಯ ಯುನೈಟೆಡ್   ಸ್ಪೋರ್ಟ್ಸ್  ಕ್ಲಬ್ನ  ಸದಸ್ಯರು ವಿಶಿಷ್ಟವಾಗಿ ಆಚರಿಸಿದರು.  ಸ್ಥಳೀಯ ಮಸೀದಿಗಳಿಂದ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಎಲ್ಲರಿಗೂ ಪಾನೀಯ ಹಾಗೂ ಸಿಹಿತಿಂಡಿಗಳನ್ನು ಹಂಚಿ ಸಂಭ್ರಮಿಸಿದರು.  ಫರಂಗಿಪೇಟೆ ಬಸು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹಾಗೂ ಬಸ್ಸು ಮತ್ತಿತರ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಿಹಿ ಹಂಚಿ ಪ್ರವಾದಿ ಮಹಮ್ಮದ್ ಅವರ ಎಲ್ಲಾ ಜನರನ್ನು ಪ್ರೀತಿಸುವ ಸಂದೇಶವನ್ನು ಸಾಕಾರಗೊಳಿಸಿದರು.

BTW_DCE24_1
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ, ಯುನೈಟೆಡ್ ಸ್ಪೋರ್ಟ್ಸ್  ಕ್ಲಬ್ನ ಅಧ್ಯಕ್ಷ ಉಮ್ಮರ್ ಫಾರೂಕ್ ಮಾತನಾಡಿ ವಿಶ್ವದ ಎಲ್ಲೆಡೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ನಡೆಸಲಾಗುತ್ತಿದೆ. ಸುಮಾರು 1500 ವರ್ಷಗಳ ಹಿಂದೆಯೇ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಜಾತ್ಯತೀತ ತತ್ವವನ್ನು ಬಲಪಡಿಸುವಂತೆ ಹಾಗೂ ಮಾನವ ಧರ್ಮವನ್ನು ಪ್ರೀತಿಸುವಂತೆ ಕರೆ ನೀಡಿದ್ದರು. ಅದರಂತೆ ಅವರು ಹಾಕಿಕೊಟ್ಟ ಜೀವನಪದ್ದತಿಯನ್ನು ಸ್ವಲವಾದರೂ ಅನುಕರಿಸಲು ಸಾಧ್ಯವಾದರೆ ಅವರ ಜನ್ಮದಿನದ ಆಚರಣೆ ಅರ್ಥಪೂರ್ಣವಾಗಲು ಸಾಧ್ಯ ಎಂದರು.
ಸ್ಪೋರ್ಟ್ಸ್  ಕ್ಲಬ್ ಉಪಾಧ್ಯಕ್ಷ ಆಸೀಫ್ ಮೇಲ್ಮನೆ, ಕಾರ್ಯದರ್ಶಿ  ಶಾರೂಕ್, ತಾಲೂಕು ಪಂಚಾಯಿತಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಪಂಚಾಯಿತಿ ಉಪಾಧ್ಯಕ್ಷ ಹಾಶೀರ್, ಸದಸ್ಯ ರಮ್ಲಾನ್, ಝಾಹೀರ್, ಸಲಾಂ, ಸಲೀಂ ಚೆಲ್ಲಿ, ಮುಹಿಯುದ್ದೀನ್ ಜುಮ್ಮಾ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಕುಂಪಣಮಜಲು, ಕೋಶಾಧಿಕಾರಿ ಫೈರೋಝ್, ಇರ್ಷಾದ್, ಸಫ್ವಾನ್, ರಿಯಾಝ್, ಮಾಲಿಕ್, ಅಹಮ್ಮದ್ ಪೇರಿಮಾರ್, ರಫೀಕ್, ಬಾಪಿ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *