ಬಂಟ್ವಾಳ : ಎತ್ತಿಗೆ ಜ್ವರ ಎಮ್ಮೆಗೆ ಬರೆ ಎನ್ನುವ ಗಾದೆಯಂತೆ ಟೋಲ್ ಪ್ಲಾಜಾದ ಟೋಲ್ ಹೊರೆಯನ್ನು ನಿಭಾಯಿಸಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ದುಭಾರಿ ದರವನ್ನು ಬಸ್ ಪ್ರಯಾಣಿಕರ ತಲೆಯ ಮೇಲೆ ಹಾಕಿ ಕೈ ತೊಳೆದು ಕುಳಿತಿದೆ. ಇಷ್ಟಕ್ಕೂ ಇಲಾಖೆಯ ವೆಚ್ಚವನ್ನು ಭರಿಸಲು ಪ್ರಯಾಣಿಕರು ತಲೆದಂಡವಾಗಿದ್ದು ಮಾತ್ರ ವಿಪಯರ್ಾಸ. ಅಲ್ಲದೆ ಈ ಹಿಂದೆ ಧರ್ಮಸ್ಥಳ ರೂಟ್ನ ಬಸ್ಸ್ ಪ್ರಯಾಣಿಕರ ಬಸ್ಸ್ ಪಾಸ್ನಲ್ಲಿ ದುಪ್ಪಟ್ಟು ಏರಿಕೆ ಮಾಡಿದಾಗ ಜಿಲ್ಲಾಧಿಕಾರಿಗೆ ಮನವಿ ಮಾಡಿ ವಾಪಾಸು ಪಡೆದ ಕೆಲವೇ ತಿಂಗಳಿನಲ್ಲಿ ಮತ್ತೆ ಅದೇ ಚಾಳಿಯನ್ನು ಮತ್ತೆ ಮುಂದುವರಿಸಿದ ಇಲಾಖೆಯ ವಿರುದ್ದ ಮತ್ತೆ ಪ್ರಯಾಣಿಕರ ದೂರು ನೀಡಲು ಮುಂದಾಗಿದ್ದಾರೆ. ಅಂತೂ ಬಂಟ್ವಾಳದ ಟೋಲ್ ಪ್ಲಾಜಾ ಮಾತ್ರ ದಿನ ಕಳೆದಂತೆ ಏನಾದರೊಂದು ಸುದ್ದಿಯನ್ನು ಮಾಡುತ್ತಿರವುದು ಸಾಕಷ್ಟು ಚಚರ್ೆಗೆ ಗ್ರಾಸವಾಗುತ್ತಿದೆ.
ಕೊನೆಗೂ ಕೆಎಸ್ಆರ್ಟಿಸಿ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಟೋಲ್ ಹೊರೆಯನ್ನು ಮಾಸಿಕ ಬಸ್ಪಾಸ್ ಪ್ರಯಾಣಿಕರ ತಲೆಗೆ ಕಟ್ಟಲು ಹೊರಟಿದೆ. ಕಳೆದ ತಿಂಗಳವರೆಗೂ ಬಸ್ಪಾಸ್ ದರದ ಜೊತೆಯಲ್ಲಿ ಪ್ರಯಾಣಿಕರಿಂದ ವಸೂಲಿಮಾಡುತ್ತಿದ್ದ ದರಕ್ಕಿಂತ ನಾಲ್ಕುಪಟ್ಟು ಮೊತ್ತವನ್ನು ಟೋಲ್ ಹೆಸರಲ್ಲಿ ವಸೂಲಿಮಾಡುತ್ತಿರುವುದು ಇದೀಗ ವ್ಯಾಪಕ ಚಚರ್ೆಗೆ ಗ್ರಾಸವಾಗಿದೆ.
ಏನಿದು ಟೋಲ್…ಫೂಲ್..!
ಟೋಲ್ಗೇಟ್ ಅಥವಾ ಟೋಲ್ಫ್ಲಾಝಾದ ಮೂಲಕ ಹಾದುಹೋಗುವ ಬಸ್ ಪ್ರಯಾಣಿಕರಿಗೂ ಟೋಲ್ನ ಹೊರೆಯನ್ನು ಹೊರಿಸುವುದು ಸಾಮಾನ್ಯ, ಆದರೆ ಅದೇ ದೊಡ್ಡ ಹೊರೆಯಾದರೆ..? ಬ್ರಹ್ಮರ ಕೂಟ್ಲು ಟೋಲ್ ಫ್ಲಾಝಾದ ವಿಚಾರದಲ್ಲೂ ತಪ್ಪು ಹೆಜ್ಜೆಯಿಟ್ಟಿರುವ ಕೆಎಸ್ಆರ್ಟಿಸಿ ಹಿಂದಿದ್ದ ಮಾಸಿಕ 40 ರೂ ದರವನ್ನು ಏಕಾಏಕಿ 160 ಕ್ಕೆ ಏರಿಸಿದೆ. ಇದು ಮಾಸಿಕ ಬಸ್ ಪಾಸ್ ಪ್ರಯಾಣಿಕರಿಗೆ ಆಘಾತ ತಂದಿದ್ದು, ನೂರಾರು ಪ್ರಯಾಣಿಕರು ಈ ಏರಿಕೆಯಿಂದಾಗಿ ಬಸ್ಪಾಸ್ ನಿಂದ ದೂರವುಳಿಯುವ ನಿಧರ್ಾರಮಾಡಿದ್ದಾರೆ.
ಟಿಕೆಟ್ ದರ ಏರಿಕೆಯಾದ ಕಾರಣದಿಂದ ಪಾಸ್ ದರ ಏರಿಕೆಯಾಗುವುದು ಸಾಮಾನ್ಯ ಆದರೆ ಕೆಎಸ್ಆರ್ಟಿಸಿ ಬಸ್ ದರದ ಜೊತೆಗೆ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ದರವನ್ನು ಸದ್ದಿಲ್ಲದೆ ಹೆಚ್ಚಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಲ್ಲಡ್ಕದಿಂದ ಮಂಗಳೂರಿಗೆ ಈ ಮೊದಲು ಇದ್ದ ಬಸ್ಪಾಸ್ ದರ 1010. ಇದರಲ್ಲಿ ಬಸ್ಪಾಸ್ ಗೆ 970, ಟೋಲ್ ಫೀ-40 ಎಂದು ವಿಂಗಡಿಸಲಾಗಿತ್ತು. ಆದರೆ ಇದೀಗ ಅದೇ ಮಾರ್ಗದ ಸಂಚಾರಕ್ಕೆ ಬಸ್ಪಾಸ್ ದರ 1230 ಕ್ಕೆ ಏರಿದ್ದು, ಇದರಲ್ಲಿ ಬಸ್ಪಾಸ್ ಗೆ 1070 ಹಾಗೂ ಟೋಲ್ ಫೀ ಗೆ 160 ನಿಗದಿಪಡಿಸಲಾಗಿದೆ. ಕಳೆದ ಸೋಮವಾರದಿಂದ ಈ ಬಸ್ ಪಾಸ್ ದರ ಏರಿಕೆ ಬಗ್ಗೆ ಮಾತುಕತೆ ನಡೆದಿದ್ದು, ಶುಕ್ರವಾರದಿಂದ ಮಂಗಳೂರಿನಲ್ಲಿ ಈ ದರ ಹೆಚ್ಚಳದ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಆದರೆ ಬಹುತೇಕ ಪ್ರಯಾಣಿಕರು ಈ ಅನಿಯಮಿತ ಹೆಚ್ಚಳದಿಂದಾಗಿ ಕೆಎಸ್ಆರ್ಟಿಸಿ ಯ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಟಿಕೆಟ್ ಟೋಲ್ ಕೈಬಿಟ್ಟಿತ್ತು.
ಕೆಎಸ್ಆರ್ಟಿಸಿ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ಫ್ಲಾಝಾದಲ್ಲಿ ಸುಂಕ ಪಾವತಿಸುವ ನೆಪದಲ್ಲಿ ಪ್ರಯಾಣಿಕೆಗೆ ಬರೆಹಾಕಲು ಯತ್ನಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಜನವರಿಯ ಆರಂಭದಲ್ಲೇ ಟೋಲ್ ಫ್ಲಾಝಾದ ಮೂಲಕ ಹಾದು ಹೋಗುವ ಎಲ್ಲಾ ಬಸ್ ಗಳಲ್ಲಿ ಟಿಕೆಟ್ ದರವನ್ನು ಏಕಾಏಕಿ 4ರೂ. ಹೆಚ್ಚುವರಿಯಾಗಿ ವಸೂಲಿ ಮಾಡಲು ಮುಂದಾಗಿತ್ತು. ಆದರೆ ಪುತ್ತೂರು ಹಾಗೂ ಹಾಗೂ ಧರ್ಮಸ್ಥಳ ರೂಟ್ನ ಕೆ.ಎಸ್.ಆರ್.ಟಿ.ಸಿ ಬಸ್ ಬಳಕೆದಾರರು ಈ ಬಗ್ಗೆ ಆಕ್ಷೇಪಸಲ್ಲಿಸಿ, ದರ ಏರಿಕೆಯನ್ನು ವಾಪಾಸು ಪಡೆಯದೇ ಇದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ ಬಳಿಕ ಟಿಕೆಟ್ ನಲ್ಲಿ ಹೆಚ್ಚುವರಿ ಟೋಲ್ಶುಲ್ಕ ಪಡೆಯುವುದನ್ನು ನಿಲ್ಲಿಸಿತ್ತು. ಟಿಕೆಟ್ ಟೋಲ್ ಅನ್ನು ಕೈಬಿಟ್ಟಿದ್ದ ಕೆಎಸ್ಆರ್ಟಿಸಿ ಇದೀಗ ಪಾಸ್ಟೋಲ್ ಸಂಗ್ರಹಿಸಲು ಹೊಸ ಮಾರ್ಗ ಅನುಸರಿಸುತ್ತಿರುವುದು ವಿಪಯರ್ಾಸವೇ ಸರಿ.
ಟೋಲ್ ಹೆಚ್ಚಳದ ಹಿನ್ನೆಲೆ..!
ಬ್ರಹ್ಮರ ಕೂಟ್ಲುವಿನಲ್ಲಿ ಟೋಲ್ಫ್ಲಾಝಾದಲ್ಲಿನ ವಸೂಲಿ ಮಾಡುವ ಸುಂಕದ ದರವನ್ನು ರಾ.ಹೆ.ಪ್ರಾ. ಇಲಾಖೆ ಎ.1ರಿಂದ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕಳೆದೆ.1 ರ ಮಧ್ಯರಾತ್ರಿಯಿಂದಲೇ ಸುಂಕದ ದರದಲ್ಲಿ 10ರಿಂದ 25 ರೂ.ವರೆಗೆ ಏಕಾಏಕಿಯಾಗಿ ಹೆಚ್ಚಿಸಲಾಗಿತ್ತು. ಈ ಕ್ರಮಕ್ಕೆ ಚಾಲಕ ಸಮುದಾಯ ಮತ್ತು ಸಾರ್ವಜನಿಕ ವಲಯದಲ್ಲಿ ವಿರೋಧವೂ ಕೇಳಿಬಂದಿತ್ತು. ಆ ಬಳಿಕ ಆಮ್ ಆದ್ಮಿ ಪಾಟರ್ಿ ಈ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು, ನಂತರದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಯವರು, ಚುನಾವಣಾ ನೀತಿಸಂಹಿತೆ ಜಾರಿಯಿರುವ ವೇಳೆಯಲ್ಲಿ ಟೋಲ್ ಹೆಚ್ಚಳ ಮಾಡದಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆ ಬಳಿಕವೂ ಹೆಚ್ಚಳದ ದರ ವಸೂಲಿಮಾಡುತ್ತಿದ್ದ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ಆಮ್ ಆದ್ಮಿ ಎ.18 ರಂದು ಪ್ರತಿಭಟನೆ ನಡೆಸಿತ್ತು. ಇದಕ್ಕೆ ಮಣಿದ ಟೋಲ್ ಫ್ಲಾಝಾದ ಗುತ್ತಿಗೆದಾರರು ಮೊದಲಿನ ಶುಲ್ಕವನ್ನೇ ಪ್ರಯಾಣಿಕರಿಂದ ವಸೂಲುಮಾಡುತ್ತಿದ್ದು, ಚುನಾವಣಾ ನೀತಿಸಂಹಿತೆ ಮುಗಿದ (ಮೇ16) ರ ಬಳಿಕ ಹೆಚ್ಚಳಗೊಂಡಿರುವ ಪರಿಷ್ಕೃತ ದರ ಜಾರಿಬರುವ ಸಾಧ್ಯತೆ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಯವರೂ ಕೂಡ ಟೋಲ್ ಫ್ಲಾಝಾದ ಬಗೆಗಿನ ಸಭೆಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು.
ಒಂದು ಕೆಎಸ್ಆರ್ಟಿಸಿ ಬಸ್ ದಿನದ ಸಂಚಾರಕ್ಕೆ ಟೋಲ್ ಫ್ಲಾಝಾದಲ್ಲಿ 90 ರೂ ಪಾವತಿಸಬೇಕಾಗಿತ್ತು, ಆದರೆ ಪರಿಷ್ಕೃತ ದರದನ್ವಯ ಈ ಸುಂಕದ ಮೊತ್ತ 115 ಆಗುವ ಸಾಧ್ಯತೆ ಇದೆ, ಈ ಹಿನ್ನೆಲೆಯಲ್ಲಿ ಟಿಕೆಟ್ ಗೂ ಈ ಹೆಚ್ಚುವರಿ ದರದ ಭಾರವನ್ನು ಹಾಕಲಾಗದೆ, ಬಸ್ಪಾಸ್ ಪ್ರಯಾಣಿಕರ ತಲೆಗೆ ಕಟ್ಟಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಏರಿಕೆಯಾದ ಬಸ್ಪಾಸ್ ದರದಲ್ಲಿ 160 ರೂ ಅನ್ನು ಟೋಲ್ ಫೀ ಆಗಿ ವಸೂಲು ಮಾಡುವ ಬಗ್ಗೆ ಕೆಲ ಕೆಎಸ್ಆರ್ಟಿಸಿ ಅಧಿಕಾರಿಗಳಿಗೇ ಮುಜುಗರವಿದೆ. ಈ ಕಾರಣದಿಂದ ಕೆಲವೆಡೆಗಳಲ್ಲಿ ಇನ್ನೂ ಟೋಲ್ ಫೀ ಇರುವ ಪಾಸ್ ಗಳ ವಿತರಣೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ

By suddi9

Leave a Reply

Your email address will not be published. Required fields are marked *