ಬಂಟ್ವಾಳ: ಜನರು ಗುರುತಿಸುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದಾಗ ಜನ ನಮ್ಮನ್ನು ಹಾಗೂ ನಮ್ಮ ವೃತ್ತಿಯನ್ನು ಗೌರವಿಸುತ್ತಾರೆ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಕೆ.ಯು. ಬೆಳ್ಳಿಯಪ್ಪ ಹೇಳಿದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡ ಎಎಸೈ ಜಯಕರ್, ಪದನ್ನೋತಿಗೊಂಡು ವರ್ಗಾವಣೆಗೊಂಡ ಬಾಲಕೃಷ್ಣ ಗೌಡ ಹಾಗೂ ದೇವರಾಜ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಾ ಕೆಲಸದಲ್ಲೇ ತೊಡಗಿಸಿಕೊಂಡಿರುವ ಪೊಲೀಸ್ ಸಿಬ್ಬಂದಿಗಳು ಕುಟುಂಬದವರೊಂದಿಗೆ ಬೆರೆಯಲು ಸಮಯ ಕೊಡಿ ಎಂದರು.
ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಂಟ್ವಾಳ ನಗರ ಠಾಣ ಎಸೈ ನಂದಕುಮಾರ್, ಸಂಚಾರಿ ಠಾಣಾ ಎಸೈ ಚಂದ್ರಶೇಖರಯ್ಯ ವೇದಿಕೆಯಲ್ಲಿದ್ದರು.
ಎಎಸೈ ಭಾಸ್ಕರ ಸ್ವಾಗತಿಸಿದರು, ಎಸೈ ರಕ್ಷಿತ್ ಎ.ಕೆ. ಪ್ರಸ್ತಾವಿಸಿದರು, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
BTW_JAN6_3

By suddi9

Leave a Reply

Your email address will not be published. Required fields are marked *