ಉಡುಪಿ ಕಟೀಲು ಕ್ಷೇತ್ರಗಳಿಗಾಗಿ ಪವಿತ್ರ ಬಾಂಧವ್ಯವಿದೆ
ಶ್ರೀ ಕೃಷ್ಣ ದುರ್ಗೆಯರದ್ಧು ಅಣ್ಣ-ತಂಗಿಯರ ಸಂಬಂಧ ಅದೇ ರೀತಿ ಉಡುಪಿ ಕಟೀಲು ಕ್ಷೇತ್ರಗಳ ಬಾಂಧವ್ಯವೂ ಗಟ್ಟಿಯಾಗಿದೆ. ಅದೇ ರೀತಿ ಇಲ್ಲಿ ತಮ್ಮ ಮಗನ ವಾತ್ಸಲ್ಯ ಸಂಬಂಧ ಸತಿ ಪತಿ ಪವಿತ್ರ ಸಂಬಂಧಗಳ ಪರಿಕಲ್ಪನೆಯೂ ಇದೆ ಪರ್ಯಾಯೋತ್ಸವದ ಯಶಸ್ವಿಗೆ ಎಲ್ಲರೂ ಪ್ರಾರ್ಥಿಸಿ ಹಾಗೂ ಯಾವುದೇ ಬೇಧಗಳಿಲ್ಲದೆ ಎಲ್ಲರೂ ಉತ್ಸವದಲ್ಲಿ ಪಾಲ್ಗೊಳ್ಳಿ.* ಎಂದು ಪಂಚಮ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠದ ಹಿರಿಯ ಪರ್ಯಾಯ ಪೀಠವೇರಲಿರುವ ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಹೇಳಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸನ್ನಿಯಲ್ಲಿ *ವಿಠಲ ಶ್ರೀ ರಾಮ* ಪಟ್ಟದ ದೇವರ ವಿವತ್ತಾದ ಮಧ್ಯಾಹ್ನ ಪೂಜೆ ವಿಧಾನ ನೈವೇಧ್ಯಾಗಳನ್ನು ನೆರವೇರಿಸಿ ಭಕ್ತಾಗಳಿಗೆ ಅನುಗ್ರಹ ಸಂದೇಶ ನೀಢಿದರು.

ಸಾಂಪ್ರಾದಾಯಿಕ ಅತಿಥ್ಯ:-
ಪೇಜಾವರ ಮಠದ ಹಿರಿಯ ಶ್ರೀ ಗಳಾದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಹಾಗೂ ಕಿರಿಯ ಶ್ರೀ ಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಕಟೀಲು ಕ್ಷೇತ್ರದ ವತಿಯಿಂದ ಸಾಂಪ್ರಾದಾಯಿಕ ಸ್ವಾಗತ, ಅತಿಥ್ಯ ಫಲಾಹಾರ ಭಿಕ್ಷೆ (ಸಾಂಪ್ರದಾಯಿಕ ಭೋಜನ) ನೀಡಿ ಗೌರವಿಸಲಾಯಿತು.
ಪಾದಪೂಜೆ : ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ವೇದಮೂರ್ತಿ ವಾಸುದೇವ ಅಸ್ರಣ್ಣ ಅವರು ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಶ್ರೀ ಗಳಿಗೆ ಸಾಂಪ್ರಾದಾಯಿಕ ಪಾದಪೂಜೆಯನ್ನು ಕ್ಷೇತ್ರದ ವತಿಯಿಂದ ನೆರವೇರಿಸಿದರು.
ಶ್ರೀಗಳು ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ತೀರ್ಥ ಸಂಪ್ರೋಕ್ಷಣೆ ನಡೆಸಿದರು. ಇದೇ ಸಂದರ್ಭ ಶ್ರೀಕೃಷ್ಣ ಸ್ತುತಿ ಹಾಗೂ ವೇದಪರಾಯಣ ನಡೆಯಿತು.
ಅರ್ಚಕರುಗಳಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತಪದ್ಮನಾಭ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ , ಹರಿನಾರಾಯಣದಾಸ ಅಸ್ರಣ್ಣ, ಬಾಹ್ಮಣ ಸಭಾದ ಅಧ್ಯಕ್ಷ ಡಾ| ಶಶಿ ಕುಮಾರ್, ಯುಗಪುರುಷದ ಭುವನಾಭಿರಾಮ ಉಡುಪ, ಬಜಪೆ ರಾಘವೇಂದ್ರ ಆಚಾರ್, ರವಿರಾಜ್ ಆಚಾರ್ ಅವರುಗಳು ಹಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ಧರು.





