ಮೂಡುಬಿದರೆ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತುಲಭಾರ ಕಾರ್ಯಕ್ರಮವು ಸ್ವರಾಜ್ಯ ಮೈದಾನದ ಬಳಿಯ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಕೆ. ಶ್ರೀಪತಿ ಭಟ್ ಅವರ ಧನಲಕ್ಷ್ಮೀ ನಿವಾಸದಲ್ಲಿ ಶ್ರೀಗಳವರಿಗೆ ತುಲಾಭಾರ ಹಾಗೂ ಗುರುವಂದನೆ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು 
ಆಶೀರ್ವಚನ ನೀಡಿದ ಪೇಜಾವರಶ್ರೀ, ಭಗವಂತ ಜಗತ್ತಿನ ಬೇರು. ಅವನ ಆರಾಧನೆಯಿಂದ ಲೋಕ ಕಲ್ಯಾಣ. ಜಗತ್ತು ಎಂಬ ಬೀಸು ಕಲ್ಲಿನ ಘರ್ಷಣೆಯಲ್ಲಿ ಭಗವಂತನೆಂಬ ಗೂಟಕ್ಕೆ ಅಂಟಿದ ಭಕ್ತರೆಂಬ ಧಾನ್ಯಗಳಿಗೆ ಯಾವುದೇ ಭಯವಿರದು. ಮಾನವ ಚೀಲವಿದ್ದಂತೆ. ಇಲ್ಲಿ ಭಗವಂತನೆಂಬ ಸಕ್ಕರೆ ತುಂಬಿದ್ದಾಗ ಮಾತ್ರ ಅಲ್ಲಿ ಸಿಹಿ ಇರುತ್ತದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಮೂಡುಬಿದರೆಯ ಸಾರ್ವಜನಿಕ, ಧಾರ್ಮಿಕ ರಂಗದ ಪ್ರಮುಖರಿಗೆ ಅವರು ಫಲಮಂತ್ರಾಕ್ಷತೆ ನೀಡಿ ಹರಸಿದರು.
ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಆಲಂಗಾರು ಶ್ರೀ ಈಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್, ,ಪಡ್ಯಾರಬೆಟ್ಟು ಕ್ಷೇತ್ರದ ಮೊಕ್ತೇಸರ ಜೀವಂಧರ ಕುಮಾರ್, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ, ಶ್ರೀ ಗೋಪಾಲಕೃಷ್ಣ ದೇವಳದ ಮೊಕ್ತೇಸರ ಗುರುಪ್ರಸಾದ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೊಟ್ಯಾನ್, ಬಿಜೆಪಿಯ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ ಎಂ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ನಾರಾಯಣ ಪಿ.ಎಂ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ್ ಜೈನ್, ವಕೀಲರ ಸಂಘದ ಅಧ್ಯಕ್ಷ ಕೆ. ಆರ್.ಪಂಡಿತ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಹರಿಪ್ರಸಾದ್ ರೈ ಬೆಳ್ಳಿಪಾಡಿ, ಮೀನಾಕ್ಷಿ ಜಯಕರ ಆಳ್ವ, ಡಾ.ಹರೀಶ್ ನಾಯಕ್, ವಿಶ್ವ ಹಿಂದೂ ಪರಿಷತ್ ಮೂಡುಬಿದರೆ ಅಧ್ಯಕ್ಷ ಕೆ.ವಿಶ್ವನಾಥ ಪ್ರಭು ಮತ್ತಿತರರು ಉಪಸ್ಥಿತರಿದ್ದರು.