ಬಜಪೆ:ಸಾಂಸ್ಕೃತಿಕ ಚೆಲುವಿನಲ್ಲೂ ಶಾಂತಿಯ ಮೂಲವಿದೆ ಕಲೆ ಕಲಾವಿದರನ್ನು ಗೌರವಿಸುವುದರಿಂದ ಕಲೆಯ ನೆಲೆ-ಬೆಲೆ ಹೆಚ್ಚುವುದು. ಸಾಮೂಹಿಕ ಪಾಲ್ಗೋಳ್ಳುವಿಕೆಯ ಸತ್ಕರ್ಮಕ್ಕೆ ಯಶಸ್ಸು ಖಚಿತ. ಪಟ್ಲ ಸತೀಶ್ ಶೆಟ್ಟಿ ಅವರೊಬ್ಬ ಸಾದಕ ನಾವೀನ್ಯ ಕಲಾವಿದರಾಗಿ ಇತರರಾಗಿ ಮಾದರಿಯಾಗಿರುತ್ತರೆ ಎಂದು ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಅನಂತ ಪದ್ಮಾನಾಭ ಆಶ್ರಣ್ಣ ಅವರು ಹೇಳಿದರು. ಅವರು ಪೆರ್ಮುದೆ ಕಲ್ಪವೃಕ್ಷ ಕುಟುಂಭಿಕರ ವತಿಯಿಂದ ಶನಿವಾರ ಜರಗಿದ ಕಟೀಲು ಮೇಳದ ಯಕ್ಷಗಾನ ಬಯಾಲಾಟ ಸೇವೆಯ ಸಂದರ್ಭ ಮೇಳದ ಭಾಗವತ ಪಟ್ಲ ಸತೀಶ ಶೆಟ್ಟಿ ಅವರಿಗೆ ಸನ್ಮಾನ ಹಾಗೂ “ಯಕ್ಷಕಲ್ಪವೃಕ್ಷ” ಬಿರುದು ಪ್ರದಾನ ಸಮಾರಂಭದಲ್ಲಿ ಆಶೀರ್ವಚನವಿತ್ತರು.
ಕಲ್ಪವೃಕ್ಷ ಕುಟುಂಬಿಕರ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ನಿರ್ಮಿತಾ ಎಸ್ ಶೆಟ್ಟಿ ದಂಪತಿಯನ್ನು ಶಾಲು ,ಸ್ಮರಣಿಕೆ ,ಚಿನ್ನದ ಉಂಗುರ ,ಸೀರೆ ,ಫಲ-ತಾಂಬೂಲ ಸಹಿತ ಸನ್ಮಾನಿಸಿ ಯಕ್ಷ ಕಲ್ಪವೃಕ್ಷ ಬಿರುದು ಪ್ರದಾನ ಮಾಡಲಾಯಿತು.
17 vm patla sanmana
ಮುಂಬೈನ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ಕೈರೆಬೆಟ್ಟು ವಿಶ್ವನಾಥ ಭಟ್ ಅಭಿನಂದನಾ ಮಾತುಗಳನ್ನಾಡಿ ಸನ್ಮಾನ ಪತ್ರ ವಾಚಿಸಿದರು. ಸಂಸದ ನಳೀನ್ ಕುಮಾರ್ ಕಟೀಲು, ಸೌತ್ ಇಂಡಿಯಾ ಫೆಡರೇಶನ್ ವಸಾಯಿ ತಾಲೂಕು ಇದರ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರುಗಳು ಪಟ್ಲ ಸತೀಶ್ ಶೆಟ್ಟಿ ದಂಪತಿಗಳನ್ನು ಸಂಮಾನಿಸಿದರು.

ಇದೇ ಸಂದರ್ಭ ಪಾರಳೆಗುತ್ತು ಭುಜಂಗಶೆಟ್ಟಿ , ರಾಘವೇಂದ್ರ ಆಚಾರ್ ಬಜ್ಪೆ, ಶ್ರೀಧರ ಶೆಟ್ಟಿ ಪೆರ್ಮುದೆ, ಯಾದವ ಕೊಟ್ಯಾನ್ ಕನ್ನಿಕಾನಿಲಯ, ಸೋಮಶೇಖರ್, ಸುಬ್ಬಣ್ಣ ಭಟ್, ಸಂಜೀವಿನೀ ಟ್ರಸ್ಟ್ನ ಡಾ/ಸುರೇಶ್ ರಾವ್, ರಾಜ್ಯಮಟ್ಟದ ದೇಹದಾಢ್ರ್ಯಪಟು ಅಶೋಕು ಕೋಟ್ಯಾನ್ ಪೆರ್ಮುದೆ ಹಾಗೂ ಕಟೀಲು ಮೇಳದ ಕಲಾವಿದ ಮಾಧವ ಬಂಗೇರಾ ಕೊಳತ್ತಮಜಲು ಅವರುಗಳನ್ನು ಗೌರವಿಸಲಾಯಿತು.
ಎನ್ ಸಿ ಪಿ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ  ಕಳತ್ತರು ವಿಶ್ವನಾಥ ಶೆಟ್ಟಿ ,ಮುಂಬೈ ಬಂಟ್ಸ್ ಅಸೋಸಿಯೇಸನ್ ಕಾರ್ಯದರ್ಶಿ  ಸಿ ಎ ಸುರೇಂದ್ರ ಶೆಟ್ಟಿ,  ಗೋಪಾಲ್ ಎಸ್ ಪುತ್ರನ್ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಉಪಾಧ್ಯಕ್ಷ ಐಕಳ ಸತೀಶ್ ಶೆಟ್ಟಿ ,ಶಶಿಧರ ಬಿ.ಶೆಟ್ಟಿ ಅವರುಗಳು ಮುಖ್ಯ ಅತಿಥಿಗಳಾಶಗಿ ಪಾಲ್ಘೊಂಡಿದ್ದರು.
ಕಲ್ಪವೃಕ್ಷ ಕುಟುಂಬಿಕರಾದ ಶೇಖರ ಶೆಟ್ಟಿ ,ಅಶೋಕ್ ಶೆಟ್ಟಿ ಪ್ರೇಮನಾಥ ಶೆಟ್ಟಿ, ಗಿರೀಶ್ ಶೆಟ್ಟಿ, ಭರತೇಶ್ ಶೆಟ್ಟಿ ಮುಂತಾದವರು ಕಾರ್ಯಕ್ರಮ ಸಂಯೋಜಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಘಟಕ ಹಾಗೂ ಕಲ್ಪವೃಕ್ಷ ಕುಟುಂಬದ ವತಿಯಿಂದ ಯಕ್ಷ ಧ್ರುವ ಫೌಂಡೇಶನ್ಗೆ ರೂ 7 ಲಕ್ಷದ ಚೆಕ್ ಹಸ್ತಾಂತರಿಸಲಾಯಿತು.
ಕಲಾವಿದ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುದರ್ಶನ ಗರ್ವಭಂಗ:*ಭಾರ್ಗವವಿಜಯ..ರತಿಕಲ್ಯಾಣ” ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

By suddi9

Leave a Reply

Your email address will not be published. Required fields are marked *