ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರಿನ ಹಳೆಗೇಟು ಎಂಬಲ್ಲಿ ನ. 12ರಂದು ನಡೆದ ಸ್ಥಳೀಯ ನಿವಾಸಿ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿ ರವಿರಾಜ್‍ನನ್ನು ಅಹ್ಮದಾಬಾದ್‍ನಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ ಬಿ.ಸಿ.ರೋಡ್‍ನ ಭುವಿತ್ ಶೆಟ್ಟಿ ಸಹಿತ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಗುಜರಾತ್‍ನ ಅಹ್ಮದಾಬಾದ್ ಜಿಲ್ಲೆಯ ವಸ್ರ್ತಾಪುರ ಎಂಬಲ್ಲಿ ಆರೋಪಿ ತನ್ನ ಚಿಕ್ಕಪ್ಪ ರಮೇಶ್ ಎಂಬವರ ಮನೆಯಲಿವಿಉವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಅಲ್ಲೇ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಎಎಸ್ಪಿ ಡಾ.ಶರಣಪ್ಪ ಮತ್ತು ಎಎಸ್ಪಿ ರಾಹುಲ್ ಕುಮಾರ್ ನಿರ್ದೇಶನದಂತೆ ಇನ್ಸ್‍ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಮತ್ತು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದಲ್ಲಿ ಎಎಸೈ ರಮೇಶ್, ಜಗದೀಶ, ರಾಜ ಮತ್ತಿತರ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.