ಬಂಟ್ವಾಳ: ಜ. 21: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ 90ನೆ ವರ್ಷಾಚರಣೆಯ ಪ್ರಯಕ್ತ `ಆದರ್ಶ ಪರಿಶುದ್ಧತೆಯ 90 ವರ್ಷ’ ಎಂಬ ಧ್ಯೇಯ ವಾಕ್ಯದಡಿ ಫೆಬ್ರವರಿ 11ರಿಂದ 14ರ ವರೆಗೆ ಕೇರಳದಲ್ಲಿ ನಡೆಯಲಿರುವ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನವನ್ನು ಜ. 23ರಂದು ಸಂಜೆ 5 ಗಂಟೆಗೆಕಡೇಶ್ವಲ್ಯಗ್ರಾಮದ ಗಡಿಯಾರದ ಶಂಸುಲ್ ಉಲಮಾ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿಯ ಪತ್ರಿಕಾ ಕಾರ್ಯದರ್ಶಿ  ಪಿ.ಜೆ.ಅಬ್ದುಲ್ಅಝೀರೆ್ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರ ಸಮ್ಮೇಳನದ ದ್ವಜಾರೋಹನವನ್ನು ಅಹ್ಮದ್ ಪೋಕೋಯ ತಂಙಳ್ ಪುತ್ತೂರು ನೆರವೇರಿಸಲಿದ್ದಾರೆ. ಅಸೈಯದ್ಅಬ್ಬಾಸ್ ಅಲಿ ಶಿಹಾಬ್ ತಂಙಳ್ಪಾಣಕ್ಕಾಡ್ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾಖಾಝಿತ್ವಾಖಾಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ದುಅ ನೆರವೇರಿಸಲಿದ್ದಾರೆ.
ಅಂದು 7:30ಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವಾಗ್ಮಿಯೂಆದಎಸ್ಕೆಎಸ್ಸೆಸೆಫ್ಕೇಂದ್ರ ಸಮಿತಿಯ ಕೋಶಾಧಿಕಾರಿ ಬಶೀರ್ ದೇಶಮಂಗಳಂ `ನಿಂಙಳಾನ್ ಉನ್ನದರ್’ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.ಕಾರ್ಯಕ್ರಮದಲ್ಲಿದ.ಕ.ಜಿಲ್ಲಾಎಸ್ಕೆಎಸ್ಸೆಸೆಫ್ಅಧ್ಯಕ್ಷಇಸ್ಹಾಕ್ ಫೈಝಿ, ಅಸೈಯದ್ಜುನೈದ್ಜಿಫ್ರಿ ಮುತ್ತುಕೋಯ ತಂಙಳ್ ಆತೂರು, ಅಡ್ವಕೆಟ್ ಹನೀಫ್ ಹುದವಿ ದೇಲಂಪಾಡಿ, ಸಚಿವರಾದರಮಾನಾಥರೈ, ಯು.ಟಿ.ಖಾದರ್ ಸೇರಿದಂತೆ ಮೊದಲಾದ ಉಲಮಾ, ಉಮಾರಾ ಹಾಗೂ ಸಾಮಾಜಿಕ, ರಾಜಕೀಯಗಣ್ಯರು ಭಾಗವಹಿಸಲಿದ್ದಾರೆಎಂದುಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪದಾಧಿಕಾರಿಯಾದ ಹಂಝಗಡಿಯಾರ, ಎಸ್ಕೆಎಸ್ಸೆಸೆಫ್ಗಡಿಯಾರ ಶಾಖೆಯ ಪ್ರ.ಕಾರ್ಯದರ್ಶಿ  ಮುಹಮ್ಮದ್ಅನ್ಸಾರ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *