ಬಂಟ್ವಾಳ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿನ ಬಂಟ್ವಾಳ ವಿಧಾನಸಬಾ ಕ್ಷೇತ್ರಕ್ಕೆ ಒಳಪಟ್ಟ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಬುಧವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿದೆ.
ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಕ್ಷೇತ್ರದ ಆರು ಜಿಲ್ಲಾ ಪಂಚಾಯಿತಿ ಹಾಗೂ 23 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
20160203_170128 (1)ಅಭ್ಯರ್ಥಿಗಳ ವಿವರ:
ಜಿ.ಪಂ.: ಸಂಗಬೆಟ್ಟು – ತುಂಗಪ್ಪ ಬಂಗೇರಾ, ಸರಪಾಡಿ- ಪ್ರಮೋದ್ ಕುಮಾರ್ ರೈ, ಗೊಳ್ತಮಜಲು- ಕಮಲಾಕ್ಷಿ ಪೂಜಾರಿ, ಮಾಣಿ ಶೈಲಜಾ ಕೆ.ಟಿ.ಭಟ್, ಕೊಳ್ನಾಡು- ಮಹಮ್ಮದ್ ಮುಸ್ತಾಫ, ಸಜೀಪಮುನ್ನೂರು- ಕೆ. ಪದ್ಮನಾಭ ಕೊಟ್ಟಾರಿ
ತಾ.ಪಂ
ಸಂಗಬೆಟ್ಟು- ರತ್ನಕುಮಾರ್ ಚೌಟ, ಚೆನನೈತ್ತೋಡಿ- ಆಶಾ ಜಯರಾಮ ಶೆಟ್ಟಿ, ಪಿಲಾತಬೆಟ್ಟು-ರಮೇಶ್ ಕುಡ್ಮೇರು, ರಾಯಿ- ಇಂದಿರಾ ಎಂ.ಬಿ., ಪಂಜಿಕಲ್ಲು- ಶೈಲಜಾ ವಿ. ಸಾಲ್ಯಾನ್, ಅಮ್ಟಾಡಿ- ಲೇಖಾ ಪಿ. ಭಂಡಾರಿ, ಕಾವಳ ಮೂಡುರು- ಹೇಮಲತಾ, ಉಳಿ- ರಂಜನಿ ಕೇಶವ, ಸರಪಾಡಿ- ವಿಲಾಸಿನಿ, ಕರಿಯಂಗಳ- ಯಶವಂತ ಪೊಳಲಿ, ನರಿಕೊಂಬಿ-ಜಯಂತಿ ವರದರಾಜ್, ಸಜೀಪಮುನ್ನೂರು- ಸುಮತಿ ಶಿವ, ಬಾಳ್ತಿಲ- ಲಕ್ಷ್ಮೀ ಗೋಪಾಲಾಚಾರ್ಯ, ವೀರಕಂಭ- ಗೀತಾ ಚಂದ್ರಶೇಖರ್, ಗೋಳ್ತಮಜಲು- ಮಹಾಬಲ ಬಂಗೇರಾ, ಮಂಚಿ- ರಮೇಶ್ ರಾವ್, ಮಾಣಿ- ಸುಂದರಿ ಆನಮದ ಶೆಟ್ಟಿ, ಕೊಳ್ನಾಡು- ಕುಲ್ಯಾರು ನಾರಾಯಣ ಶೆಟ್ಟಿ, ಕನ್ಯಾನ- ಉದಯ ರಮಣ, ಸರಪಾಡಿ-ಶಿವಪ್ರಸಾದ್ ಶೆಟ್ಟಿ,

ಕುಮ್ಕಿ ಹಕ್ಕು: 6 ರಂದು ಸಭೆ
ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ರೈತರ ಕುಮ್ಕಿ ಹಕ್ಕನ್ನು ಕಸಿಯಲು ಹೊರಟಿದೆ. ಇದರ ವಿರುದ್ದ ಫೆ.6ರಂದು ಪುತ್ತೂರಿನ ಒಕ್ಕಲಿಗ ಯಾನೆ ಗೌಡ ಸಂಘದ ಸಭಾ ಭವನದಲ್ಲಿ ನಡೆಯಲಿರುವ ಕುಮ್ಕಿ ಹಕ್ಕಿಗಾಗಿ ಹೋರಾಟ ಹಾಗೂ ರೈತರ ಜಾಗೃತಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದು ಬಂಟ್ವಾಳ ಕ್ಷೇತ್ರದಿಂದಲೂ ಸಾವಿರಕ್ಕೂ ಅಧಿಕ ಮಂದಿ ರೈತರು ಇದರಲ್ಲಿ ಭಾಗವಹಿಸಲಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಕುಮ್ಕಿ ಹಕ್ಕು ನೀಡುವ ಭರವಸೆ
ನಿಡಿದ್ದು ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ವಂಚಿಸಿದೆ ಎಂದು ಆರೋಪಿಸಿದ ಅವರು ರೈತರ ಕುಮ್ಕಿ ಜಮೀನಿನ ಮಂಜೂರಾತಿಗಾಗಿ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅವರು ಈ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಂಸದ ನಳಿನ್ ಕುಮಾರ್ ಅವರನ್ನು ಟೀಕಿಸುವ ಮೂಲಕ ತನಗಿರುವ ರಾಜಕೀಯ ಅಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಜಿ. ಆನಂದ ಅವರು ಲೇವಡಿ ಮಾಡಿದರು.
ಮರಳು ದಂದೆ:
ಜಿಲ್ಲೆಯಲ್ಲಿ ಮರಳು ದಂದೆ ಅವ್ಯಾಹತವಾಗಿ ನಡೆಯುತ್ತಿದ್ದು ಇತ್ತೀಚೆಗೆ ಜಿಲ್ಲಾಧಿಕಾರಿಯವರು ಹೊರರಾಜ್ಯಕ್ಕೆÀ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ನಿಷೇಧಿಸುವ ಬದಲು ಸ್ಥಳೀಯವಾಗಿಯೂ ಮರಳು ಸಾಗಾಟ ನಿಷೇಧಿಸಿರುವುದರಿಂದ ಜನಸಾಮಾನ್ಯರು ಹಾಗೂ ಮನೆ ನಿರ್ಮಿಸುವ ಜನರು ತೊಂದರೆಗೊಳಗಾಗಿದ್ದಾರೆ ಎಂದರು.
ತಾಲೂಕಿನಲ್ಲಿ ನೂರಾರು ಮಂದಿಯ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು ಈ ವ್ಯವಸ್ಥೆಯನ್ನು ಜಾರಿಗೆ ತರುವಾಗಲೇ ಸಮರ್ಪಕವಾಗಿ ಪರಿಶೀಲಿಸದೇ ಇದೀಗ ಏಕಾಏಕಿಯಾಗಿ ಬಿಪಿಎಲ್ ಪಡಿತರ ರದ್ದು ಪಡಿಸುವ ಮೂಲಕ ಬಡವರಿಗೆ ಅನ್ಯಾಯವೆಸಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪಕ್ಷ ಪ್ರಮುಖರಾದ ದಿನೇಶ್ ಭಂಡಾರಿ, ಆನಂದ ಕುಲಾಲ್ ಎಡ್ತೂರು, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು ಹಾಜರಿದ್ದರು.
ಪುದುಗೆ ಯಶವಂತ:
ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪುದು ಜಿ.ಪಂ.ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಂಟ್ವಾಳ ತಾಲೂಕು ಪಂಚಾಯಿತಿನ ಅಧ್ಯಕ್ಷ ಯಶವಂತ ದೇರಾಜೆಯವರನ್ನು ಘೋಷಿಸಿಸಲಾಗಿದೆ. ಅದೇ ರೀತಿ ಸಜೀಪಮೂಡ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಆಯ್ಕೆಯಾಗಿದ್ದಾರೆ. ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಅಭ್ಯರ್ಥಿಯನ್ನು ಕಾಯ್ದಿರಿಸಲಾಗಿತ್ತು.

By suddi9

Leave a Reply

Your email address will not be published. Required fields are marked *