ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫರಂಗಿಪೇಟೆ ಜುಮಾದಿಗುಡ್ಡೆ ಸಂಪರ್ಕ ಕಲ್ಪಿಸುವ ಕಾಲು ದಾರಿ ದುರಸ್ತಿಗೊಳಿಸಿಲ್ಲ ಎಂದು ಆರೋಪಿಸಿ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಫರಂಗಿಪೇಟೆ ಹಳೆರಸ್ತೆಗೆ ತಾಗಿಕೊಂಡಂತಿರುವ ಇಲ್ಲಿನ ಜುಮಾದಿಗುಡ್ಡೆ ಸಂಪರ್ಕ ಕಾಲು ದಾರಿಯು ಕಳೆದ ಮಳೆಗಾಲದಿಂದಲೂ ಸಂಪೂರ್ಣವಾಗಿ ಹದೆಗೆಟ್ಟು ಹೋಗಿದೆ. ಇದರಿಂದಾಗಿ ಇಲ್ಲಿನ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಪೇಟೆ ಸಂಪರ್ಕ ಕಡಿತಗೊಂಡು ಸುತ್ತು ಬಳಸಿ ಪೇಟಗೆ ಬರುವಂತಾಗಿದೆ.
ಅಲ್ಲದೆ ಕಳೆದ ವರ್ಷ ಇಲ್ಲಿನ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಖಾಸಗಿ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ವೇಳೆ ಇದರ ಮಾಲೀಕ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಗುಡ್ಡದ ಮಣ್ಣು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೀಗ ಇಲ್ಲಿನ ಸುಮಾರು 9 ಮನೆಗಳಿಗೆ ತೆರಳಲು ಸಂಪರ್ಕವೇ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ವಿವಿಧ ಜನಪ್ರತಿನಿಧಿಗಳು ಮತ್ತು ಮಂತ್ರಿ ಮಹಾಷಯರಿಗೂ ಮನವಿ ಸಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.