ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮ ನಯನಾಡು ಮಿತ್ತಬೆಟ್ಟು ಶ್ರೀ ವನದುರ್ಗಾದೇವಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವವು ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಜ.30ರಂದು ದೇವಸ್ಥಾನದಲ್ಲಿ ಜರಗಿತು.
ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಭಜನೆ, ರಾತ್ರಿ ಹೂವಿನ ಪೂಜೆ, ದೀಪಾರಾಧನೆ,ಪರಿವಾರ ದೈವಗಳಾದ ಕಲ್ಲುರ್ಟಿ ಮತ್ತು ಗುಳಿಗ ನೇಮೋತ್ಸವ ನಡೆಯಿತು .ಬಳಿಕ ಸರಪಾಡಿ ಬಾಚಕೆರೆ ಮೇಳದವರಿಂದ ಶ್ರೀ ದೇವಿ ಮಹಿಷರ್ಮನಿ ಯಕ್ಷಗಾನ ಬಯಲಾಟ ನಡೆಯಿತು.

ಸಚಿವ ಬಿ.ರಮಾನಾಥ ರೈ,ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್,ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಸಲಹಾ ಮಂಡಳಿ ಅಧ್ಯಕ್ಷ ಪಿ.ಬಾಲಯ್ಯ ಹೆಗ್ಡೆ, ಆಡಳಿತ ಮಂಡಳಿ ಅಧ್ಯಕ್ಷ ಎನ್. ಮೋಹನ್ ಹೆಗ್ಡೆ ನೇರಳೆಕಟ್ಟೆ, ಯಕ್ಷಗಾನ ಬಯಲಾಟ ಸೇವಾಕತರ್ೃ ಸುಂದರರಾಜ್ ಹೆಗ್ಡೆ ಮುಂಬೈ, ಅನ್ನಸಂತರ್ಪಣೆಯ ಸೇವಾಕರ್ತ ರಾಮ ಹೆಗ್ಡೆ ಕುಳ, ಶ್ರೀ ವನದುರ್ಗ ದೇವಿ ಸೇವಾ ಮಂಡಳಿ ಅಧ್ಯಕ್ಷ , ನ್ಯಾಯಾಶ ದಿನೇಶ್ ಹೆಗ್ಡೆ, ಭಜನ ಮಂಡಳಿ ಅಧ್ಯಕ್ಷ ಉಮೇಶ್ ಆಚಾರ್ಯ,ಮಾಲಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಅರ್ಚಕರಾದ ಲಕ್ಷ್ಮಣ ಹೆಗ್ಡೆ, ರಾಘವ ಹೆಗ್ಡೆ, ಪ್ರಮುಖರಾದ ನಿತ್ಯಾನಂದ ಮಾಲಾಡಿ, ಕೃಷ್ಣರಾವ್ ಬೆಂಗಳೂರು ಮತ್ತಿತರರು ಪಾಲ್ಗೊಂಡಿದ್ದರು.