ಬಂಟ್ವಾಳ : ದ.ಕ.ಜಿಲ್ಲಾ ಪಂ. ಹಾಗೂ ತಾ.ಪಂ. ಚುಣಾವಣೆ – 2016ಕ್ಕೆ ಸಂಬಂದಿಸಿದಂತೆ ದ.ಕ.ಜಿಲ್ಲೆಗೆ ರಾಜ್ಯ ಚುಣಾವಣಾ ಆಯೋಗದಿಂದ ನೇಮಕಾತಿಯಾಗಿರುವ ಚುಣಾವಣಾ ವೀಕ್ಷಕರಾಧ ಶ್ರೀ. ಬಸವರಾಜೇಂದ್ರ ಎಚ್. ನಿರ್ದೇಶಕರು,(ತಾಂತ್ರಿಕ) ಕಿಯೋನಿಕ್ಸ್ ಬೆಂಗಳೂರು ಇವರು ಬಂಟ್ವಾಳ ತಾಲೂಕಿನ ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವಾಗಿರುವ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿರುತ್ತಾರೆ.
KAR_8344

KAR_8348
ಬಳಿಕ ತಾಲೂಕಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂ. ಚುಣಾವಣಾಧಿಕಾರಿ ಡಾ.ಅಶೋಕ್ ಡಿ.ಆರ್ ಸಹಾಯಕ ಕಮೀಷನರ್ ಮಂಗಳೂರು, ತಹಶೀಲ್ದಾರ್ ಪುರಂದರ ಹೆಗಡೆ, ಚುಣಾವಣಾ ಶಿರಸ್ತೇದಾರರಾದ ಪರಮೇಶ್ವರ ನಾಯ್ಕ್ , ಕಂದಾಯ ನೀರಿಕ್ಷಕರಾದ ನಾರಾಯಣ ಪೂಜಾರಿ ಆಸಿಫ್ ಇಕ್ಬಾಲ್, ದಿವಾಕರ ಮುಗುಳ್ಯ ಮತ್ತು ಗ್ರಾಮ ಕರಣಿಕರಾದ ಬಸವರಾಜ್ ಸನಾದಿ, ಜನಾರ್ಧನ , ವಿನೋದ್, ತೌ ಫೀಕ್ , ಸಿಬ್ಬಂದಿ ಸದಾಶಿವ ಕೈಕಂಬ , ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *