ಬಂಟ್ವಾಳ :ತಾಲೂಕಿನ ಕಕ್ಯಪದವುನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಗುರುವಾರ ಸಂಭವಿಸಿದೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬಂಧಿಸಲಾಗಿದ್ದು ಎಂಟು ಕೋಳಿಗಳು ಮತ್ತು ಒಂದು ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರಾದ ರಘುನಾಥ,ಗೋಪಾಲ ಶೆಟ್ಟಿ,ಯಶೋಧರ,ಚಂದ್ರ,ಭಾಸ್ಕರ ಬಂಧಿತರಾಗಿದ್ದಾರೆ.ಪುಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ಡಿ.ದಾಳಿಯ ನೇತೃತ್ವ ವಹಿಸಿದ್ದರು.