ಬಂಟ್ವಾಳ: ಇದೇ ವೇಳೆ ಸೀತಾರಾಮ ಕುಮಾರ್ ಕಟೀಲು (ಯಕ್ಷಗಾನ ಕ್ಷೇತ್ರ), ಕೃಷ್ಣಯ್ಯ ಎ.ಹೆಗ್ಡೆ (ಉದ್ಯಮ), ದಯಾನಂದ ಜಿ.ಕತ್ತಲ್ಸಾರ್ (ಜಾನಪದ), ರೋಹಿನಾಥ ಪಾದೆ (ಶಿಕ್ಷಣ), ಚಿತ್ರಕುಮಾರ್ ಉಡುಪಿ (ಸಂಘಟನೆ /ಸಮಾಜ ಸೇವೆ) ಇವರಿಗೆ ‘ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ’ ಪ್ರದಾನ ನಡೆಯಲಿದೆ.
ಸ್ವಸ್ತಿಕ್ ಸಂಭ್ರಮ ಪುರಸ್ಕಾರ:
ವರದರಾಜ ಪೈ ಮಾವಿನಕಟ್ಟೆ (ಉದ್ಯಮ), ರಾಮಮೋಹನ್ ಶೆಟ್ಟಿ ಎಣ್ಮಕಜೆ, ಸಿದ್ದಕಟ್ಟೆ (ಸಮಾಜ ಸೇವೆ), ಗೋಪಾಲ ಅಂಚನ್ ಆಲದಪದವು ಮತ್ತು ಮೋಹನ್ ಕೆ.ಶ್ರೀಯಾನ್ ರಾಯಿ (ಪತ್ರಿಕೋದ್ಯಮ), ಕು.ಪಂಚಮಿ ಮತ್ತು ಕು. ಅದ್ವಿಕಾ ಶೆಟ್ಟಿ (ಬಾಲಪ್ರತಿಭೆ), ಮೆಸ್ಕಾಂನ ಮಂಜಪ್ಪ (ಸೇವೆ) ಮತ್ತು ಅತ್ಯುತ್ತಮ ಯುವ ಸಂಘಟನೆ ಸಮಾಜ ಸೇವೆಗಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇವರಿಗೆ ‘ಸ್ವಸ್ತಿಕ್ ಸಂಭ್ರಮ’ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮ:
ಸಂಸದ ನಳೀನ್ ಕುಮಾರ್ ಕಟೀಲು ಮತ್ತು ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತು ವಿಧಾನ ಸಭೆ ವಿರೋಧ ಪಕ್ಷ ಮುಖ್ಯ ಸಚೇತಕ ಸುನಿಲ್ ಕುಮಾರ್ ಅವರು ‘ಪ್ರಶಸ್ತಿ ಪ್ರದಾನ’ ಮಾಡುವರು. ವಿಧಾನ ಪರಿಷತ್ ವಿರೋಧ ಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಸಂಘದ ಸ್ಥಾಪಕಾಧ್ಯಕ್ಷ, ಸಂಗಬೆಟ್ಟು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.