ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ತುಳುಕೂಟ ಬಂಟ್ವಾಳ ಇವರ ಸಹಯೋಗದಲ್ಲಿ ಬಂಟ್ವಾಳ ತಾಲೂಕು ತುಳು ಮಿನದನವು ಮಾ.5 ರ ಶನಿವಾರ ಬಿ.ಸಿ.ರೋಡಿನ ಪದ್ಮಾಕಾಂಪ್ಲೆಕ್ಸ್ ಹಿಂದಿನ ಪದ್ಮನಾಭನಗರದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ಸದಸ್ಯ ಸಂಚಾಲಕ ಡಿ.ಎಂ.ಕುಲಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಿನದನವನ್ನು ಉದ್ಘಾಟಿಸಲಿದ್ದು, ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು. ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯ ಬಿ.ಮೋಹನ್, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಳಿಕ ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ಮಕ್ಕಳಿಂದ ತುಳುನಾಡ ವೈಭವ ನಡೆಯಲಿದ್ದು, ಅಪರಾಹ್ನ ಮಾತೃಭಾಷಾ ಶಿಕ್ಷಣದ ಕುರಿತಾಗಿ ವಿಚಾರಗೋಷ್ಠಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪುತ್ತೂರು ಬಿಇಒ ಶಶಿಧರ್, ಫ್ರಾನ್ಸಿಸ್ ಹಿಲರಿ ಡಿ’ಸೋಜ, ಶೇಸಪ್ಪ ರೈ, ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ವಿಷಯ ಮಂಡನೆ ಮಾಡುವರು. ಅಪರಾಹ್ನ ಭೋಜನ ವಿರಾಮದ ವೇಳೆ ಕು.ಅಕ್ಷತಾ ಕುಡ್ಲ ರವರು ಮಿಮಿಕ್ರಿ ಕಾರ್ಯಕ್ರಮವನ್ನು ನಡೆಸಿಕೊಡುವರು. ಬಳಿಕ 2 ಗಂಟೆಯಿಂದ ತುಳು ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ರವರ ಅಧ್ಯಕ್ಷತೆಯಲ್ಲಿ ತುಳು ಕಬಿತೆ ಕೂಟ ನಡೆಯಲಿದೆ.ಅಪರಾಹ್ನ 3 ರಿಂದ 4 ರವೆರೆಗೆ ಈ ಚಿಣ್ಣರಲೋಕ ಸೇವಾಟ್ರಸ್ಟ್ ತಂಡದಿಂದ ರಾಗ ರಂಜಿನಿ ರಸಮಂಜರಿ ನಡೆಯಲಿದೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಯವರು ಸಮಾರೋಪದ ಮಾತುಗಳನ್ನಾಡುವರು. ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಒಡಿಯೂರು ಗ್ರಾಮ ವಿಕಾಸ ಕೇಂದ್ರದ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಳಿಕ ಜೈನ್ ಮಿಲನ್ ಬಂಟ್ವಾಳ ಇವರಿಂದ ರಂಗಿತೊದ ಲೇಸ್ ಹಾಗೂ ಶೃತಿ ಆಟ್ರ್ಸ್ ಬಿ.ಸಿ.ರೋಡು ಇವರಿಂದ ಮಾಯೊಕೊದ ಪೊಣ್ಣು ತುಳು ಯಕ್ಷಗಾನ ನಡೆಯಲಿದೆ. ಮಿನದನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಇಲಾಖೆ ವತಿಯಿಂದ ಒಒಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *