ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಅಗ್ರಶಾಲೆಯಲ್ಲಿ ಗಣಯಾಗ ಹಾಗೂ ಹಾಲು ಉಕ್ಕೇರಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮಾಜಿ ಜಿ.ಪಂ.ಅಧ್ಯಕ್ಷರಾದ ಬಿ.ಸದಾನಂದ ಪೂಂಜ, ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್ , ಎ.ಜಯಶಂಕರ ಬ್ರಾಸಿತ್ತಾಯ, ಕೆ.ಸದಾನಂದ ಶೆಟ್ಟಿ , ವಾಸು ಗಟ್ಟಿ, ದೇವಿಪ್ರಸಾದ್ ಪೂಂಜ, ಉಪೇಂದ್ರ ಆಚಾರ್ಯ, ಜಯಪ್ರಕಾಶ, ಚಂದ್ರಹಾಸ , ನಾರಾಯಣ, ದಿವಾಕರ, ರಾಘವೇಂದ್ರ ಭಟ್, ಪರಮೇಶ್ವರ ಹೇರಳೆ, ವಿಶ್ವನಾಥ ಬೆಳ್ಚಾಡ, ಮುಂತಾದವರು ಉಪಸ್ಥಿತರಿದ್ದರು.