ಬಂಟ್ವಾಳ: ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸುವ ಮೂಲಕ ಸದ್ಯದ ಮಟ್ಟಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿಗೊಳಿಸಿದ್ದಾರೆ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪುರಸಭೆ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ ಮಾಡಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

