ಬಂಟ್ವಾಳ: ಮಾ. 6: ಸರಳ ಹಾಗೂ ಸಾಮೂಹಿಕ ವಿವಾಹ ಬಡವರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರುಬಿಟ್ಟಿದ್ದು, ಇದರಿಂದ ಪಾವಿತ್ರತೆಯೂ ಪ್ರಾಧಾನ್ಯತೆಯೂ ಹೊಂದಿರುವ ಸರಳ ಹಾಗೂ ಸಮೂಹಿಕ ವಿವಾಹದಂತ ಕಾರ್ಯಕ್ಕೆ ಮಹತ್ವವೇ ಇಲ್ಲದಂತಾಗಿದೆ ಎಂದು ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಙಳ್ ಬೇಸರ ವ್ಯಕ್ತಪಡಿಸಿದರು.

samuhika vivaha 01

ಫರಂಗಿಪೇಟೆ ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ಹಾಗೂ ಮುಹಿಯುದ್ದೀನ್ ಜುಮಾ ಮಸೀದಿ ಇದರ ಸಹಯೋಗದೊಂದಿಗೆ 10 ಜೋಡಿಗಳ ಸರಳ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ದುಅ ಮೂಲಕ ಚಾಲನೆ ನೀಡಿದ ಬಳಿಕ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಸಾಮೂಹಿಕ ವಿವಾಹ ಕಾರ್ಯದಲ್ಲಿ ಯುವ ಜನತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಾಗ ಸಾಮೂಹಿಕ ವಿವಾಹ ಕಾರ್ಯ ಇನ್ನಷ್ಟು ಅರ್ಥಪೂರ್ಣ ಹಾಗೂ ಮಹತ್ವವನ್ನು ಪಡೆಯಲಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಓರ್ವ ಪುರುಷ ಅಥವಾ ಹೆಣ್ಣು ಮದುವೆಯಾಗಲು ಬಯಸಿದರೆ ಅವರಿಗೆ ಬೇಕಾದ ಸಹಾಯ ಸಹಕಾರ ನೀಡುವುದು ಪ್ರತೀಯೋರ್ವನ ಕರ್ತವ್ಯವಾಗಿದೆ. ಅಂತಹ ಕೆಲಸವನ್ನು ಮಾಡುತ್ತಿರುವ ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಹಾಗೂ ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯ ಶಾಘ್ಲನೀಯವಾಗಿದೆ. ಮುಂದೆಯೂ ಇಂತಹ ಕೆಲಸಗಳ ಮೂಲಕ ಇಲ್ಲಿನ ಖಿದ್ಮತುಲ್ ಇಸ್ಲಾಮ್ ಹಾಗೂ ಜುಮಾ ಮಸೀದಿ ಇತಿಹಾಸ ನಿರ್ಮಿಸಲಿ ಎಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಫ್.ಮುಹಮ್ಮದ್ ಬಾವ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಫರಂಗಿಪೇಟೆ ಜುಮಾ ಮಸಿದಿಯ ಖತೀಬ್ ಉಸ್ಮಾನ್ ದಾರಿಮಿ, ಮಾಹಿನ್ ದಾರಿಮಿ ಪಾತೂರು, ಸಚಿವ ಯು.ಟಿ.ಖಾದರ್, ಹಜಾಜ್ ಗ್ರೂಪ್ಸ್ ಗೊಳ್ತಮಜಲು ಇದರ ಹನೀಫ್ ಹಾಜಿ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಫರಂಗಿಪೇಟೆ ಜುಮಾ ಮಸೀದಿಯ ಕಾರ್ಯದರ್ಶಿ  ಹಾಜಿ ಎ.ಯೂಸುಫ್ ಅಲಂಕಾರ್, ಸುಹಾ ಕಾಂಪ್ಲೆಕ್ಸ್ ಫರಂಗಿಪೇಟೆ ಇದರ ಶಬೀರ್, ಅರಫ ಗ್ರೂಪ್ ತುಂಬೆ ಇದರ ಅಬ್ದುಲ್ ಲತೀಫ್, ಸಲೀಂ ಟೈಲರ್ ಫರಂಗಿಪೇಟೆ, ಕುಂಜತ್ಕಲ ನೂರುಲ್ ಹುದಾ ಮದರಸದ ಅಧ್ಯಕ್ಷ ಆಬೀದ್ ಅಲಿ, ರಾಜದಾನಿ ಜ್ಯುವೆಲ್ಲರಿ ಫರಂಗಿಪೇಟೆ ಇದರ ಶುಕುರ್, ಅಟ್ಲಸ್ ಗೋಲ್ಡ್ ಫರಂಗಿಪೇಟೆ ಇದರ ಶಫರ್ ಖಾನ್, ಪಿಶ್ ಮರ್ಚಂಟ್ ಮಂಗಳೂರು ಇದರ ಇಸ್ಮಾಯೀಲ್ ಕೆಇಎಲ್ ಮೊದಲಾದವರು ಉಪಸ್ಥಿತರಿದ್ದರು.
ನಿಯಾರೆ್ ಕಿರಾಅತ್ ಪಠಿಸಿದರು. ಜಿಪಂ ಮಾಜಿ ಸದಸ್ಯ ಎಫ್.ಉಮರ್ ಫಾರೂಕ್ ಸ್ವಾಗತಿಸಿದರು. ಶಮೀರ್ ಅಲ್ತಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್.ಮುಹಮ್ಮದ್ ಬಾವ ಧನ್ಯವಾದಗೈದರು. ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *