ತಪ್ಪುಮುಕ್ತತೆಯಿಂದ ಜೀವನ ಸಾರ್ಥಕ :ಸುರೇಶ್ ಎಸ್.ಭಂಡಾರಿ
ಮುಂಬಯಿ : ನಮ್ಮ ಮಕ್ಕಳು ನಮ್ಮನ್ನು ಕಾಣಬೇಕಾದರೆ ನಾವೂ ಮೊದಲು ನಮ್ಮ ಮಾತಪಿತರನ್ನು ಒಳ್ಳೆಯದಾಗಿ ನೋಡಬೇಕು. ನಾವು ನಮ್ಮ ಮಾತೃಭೂಮಿಯ ಸಂಸ್ಕಾರವನ್ನು ಯಾವಾಗಲೂ ಮರೆಯಬಾರದು ಆಗ ಮಾತ್ರ ಇಂದಿನ ಈ ಯುಗದಲ್ಲಿ ಒಳ್ಳೆಯ ಜೀವನ ನಡೆಸಲು ಸಾಧ್ಯ. ತಪ್ಪುಗಳನ್ನು ತಿದ್ದಿಕೊಂಡಾಗ ಭವ್ಯ ಬದುಕು ಪೂರಕವಾಗುವುದು. ಆದುದರಿಂದಲೇ ತಪ್ಪುಮುಕ್ತತೆಯಿಂದಜೀವನಸಾರ್ಥಕ ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆತಿಳಿಸಿದರು. ಇಂದಿಲ್ಲಿ ಭಾನುವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ವೀರಕೇಸರಿ ಕಲಾವೃಂದ ಮುಂಬಯಿ ಇದರ 37ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಸುರೇಶ್ ಭಂಡಾರಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಹೆಸರಾಂತ ಹೊಟೇಲು ಉದ್ಯಮಿ ಭಾಸ್ಕರ್ ಶೆಟ್ಟಿ ಖಾಂದೇಶ್, ಗೌರವ ಅತಿಥಿಗಳಾಗಿ ಸಮಾಜ ಸೇವಕರುಗಳಾದ ನ್ಯಾಯವಾದಿ ಸಂತೋಷ್ ಹೆಗ್ಡೆ, ನ್ಯಾಯವಾದಿ ಸಂಜೀವ ಶೆಟ್ಟಿ ಕಟ್ಕೆರೆ, ಸರಳಾ ಬಿ.ಶೆಟ್ಟಿ, ಜಯಂತಿ ರಘು ಮೊೈಲಿ ಉಪಸ್ಥಿತರಿದ್ದು, ನಾಡಿನ ಹೆಸರಾಂತ ಸಮಾಜ ಸೇವಕ ಚಿತ್ರಾಪು ಕೆ.ಎಂ ಕೋಟ್ಯಾನ್, ಯಕ್ಷಗಾನ ಕಲಾವಿದೆ ಎಕ್ಕಾರು ದಯಾಮಣಿ ಶೆಟ್ಟಿಮತ್ತು ಸುಧಾಕರ್ ಶೆಟ್ಟಿ ಹಾಗೂ ಶಿಕ್ಷಕ ಜಯರಾಜ್ ಜೈನ್ ಮತ್ತು ಮಂಜುಳಾ ಜಯರಾಜ್ ದಂಪತಿಗಳನ್ನುಅವರನ್ನು ಸನ್ಮಾನಿಸಿದರು.
ಹಾಗೂ ರೋಹಿತ್ ಡಿ.ಶೆಟ್ಟಿ, ಕು| ಅಂಜನಾ ಎಂ.ಶೆಟ್ಟಿ, ಕು| ಜೋತ್ಸಾ ್ನ ಆರ್.ದೇವಾಡಿಗ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ಹಾಗೂ ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು. ನಾವೆಲ್ಲರೂ ನಮ್ಮ ಮಾತೃಭೂಮಿಯನ್ನು ಬಿಟ್ಟು ಮುಂಬಯಿಯಂತಹ ಕರ್ಮಭೂಮಿಯಲ್ಲಿ ನೆಲೆಯನ್ನು ಸ್ಥಾಪನೆ ಮಾಡಿದ್ದೇವೆ. ಈ ಕರ್ಮ ಭೂಮಿಯಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ನಾವು ಬೆಳೆಸುತ್ತಾ ಬಂದಿದ್ದೇವೆ. ಇದಕ್ಕೆ ಇಂತಹ ಸಂಸ್ಥೆಗಳ ಪ್ರೇರಣೇಯೂ ಇದೆ. ಮುಂದೆಯೂ ತಮ್ಮತನದಿಂದ ಜೀವನವನ್ನು ಮುನ್ನಡೆಸಲು ಸಂಸ್ಕೃತಿ ಉಳಿಸಿ ಬೆಳೆಸೋಣ ಎಂದು ಭಾಸ್ಕರ್ ಶೆಟ್ಟಿ ಖಾಂದೇಶ್ ಮುಖ್ಯ ಅತಿಥಿನುಡಿಗಳನ್ನಾಡಿ ನುಡಿದರು. ಅತಿಥಿಗಳು ಮತ್ತು ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಅವಕಾಶಕ್ಕಾಗಿ ಅಭಿವಂದಿಸಿದರು. ಕಲಾವೃಂದದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರು ಸುಖಾಗಮನ ಬಯಸಿದರು. ಉಪಾಧ್ಯಕ್ಷ ನ್ಯಾ| ಗುಣಾಕರ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮರಾಜ್ ಟಿ.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸುಧಾಕರ ಎಲ್ಲೂರು, ವಾಣಿ ಶೆಟ್ಟಿ, ರತ್ನಾಕರ್ ಪೂಜಾರಿ ಪುರಸ್ಕೃತರನ್ನು ಪರಿಚಯಿಸಿದರು. ಗೌರವ ಕೋಶಾಧಿಕಾರಿ ನವೀನ್ ಗುಳಿಬೆಟ್ಟು ಸಭಾಕಾರ್ಯಕ್ರಮ ನಿರೂಪಿಸಿದರು. ಗೌ|ಪ್ರ|ಕಾರ್ಯದರ್ಶಿ ರಮೇಶ್ ಶಿವಪುರ ಧನ್ಯವಾದಿಸಿದರು. ಮಹಾನಗರದವಿವಿಧ ಸಂಸ್ಥೆಗಳ ಕಲಾವಿದರು ವೈವಿಧ್ಯಮಯ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಕಟೀಲು ಸದಾನಂದ ಶೆಟ್ಟಿ ನಿರ್ದೇಶನದಲ್ಲಿ ಮಹಿಳಾ ಕಲಾವಿದರು `ಶ್ರೀಕೃಷ್ಣ ಲೀಲೆ-ಕಂಸವಧೆ’ ಯಕ್ಷಗಾನಪ್ರದರ್ಶಿಸಿದರು.








