ಬಂಟ್ವಾಳ : ಬಹಳ ಹಿಂದೆ ಈ ನಾಡಿನಾದ್ಯಂತ ಸ್ಥಳೀಯ ಸಂಘ ಸಂಸ್ಥೆಗಳಿಂದ ತಮ್ಮ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ವಿವಿಧ ನಾಟಕಕಾರರು ರಚಿಸಿದ ಕನ್ನಡ ತು ಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸ್ಥಳೀಯ ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾಟಕಗಳಲ್ಲಿ ಸಿನಿಮಾ ಹಾಡಿನ ಧಾಟಿಯ ಸ್ವಂತ ರಾಗಸಂಯೋಜನೆಯ ಹಾಡುಗಳನ್ನು ಪ್ರಸ್ತುತ ಪಡಿಸುತ್ತಿದ್ದರು.

KAR_1378
ಆದರೆ ಇಂದು ನಾಟಕರಂಗ ಆಧುನೀಕರಣದತ್ತ ವಾಲುತ್ತಿದೆ. ಹವ್ಯಾಸಿ ನಾಟಕಕಲಾ ತಂಡಗಳು ರೂಪುಗೊಳ್ಳುತ್ತದೆ. ಪರಿಣಾಮವಾಗಿ ಸ್ಥಳೀಯ ಕಲಾವಿದರು ಅಭಿನಯಿಸುತ್ತಿದ್ದು ನಾಟಕಗಳು ನೇಪಥ್ಯಕ್ಕೆ ಸರಿಯುತ್ತದೆ. ಈ ಸಂದರ್ಭದಲ್ಲಿ ಹಿಂದೆ ಪ್ರಸ್ತುತಗೊಂಡ ತು ಳು ನಾಟಕಗಳ ಹಾಡುಗಳನ್ನು ಉಳಿಸಬೇಕು , ಮುಂದಿನ ಜನಾಂಗ ಕ್ಕೆ ಸಮರ್ಪಿಸಬೇಕು ಎನ್ನುವ ಉದ್ದೇಶದಿಂದ ಕವಿ ಸಾಹಿತಿ,ಉದ್ಯಮಿ ಹನೀಫ್ ಪಲ್ರ್ಯ ಇವರು ಉಂದು ದುಂಬುದ ಎಂಬ ನಾಟಕದ ಹತ್ತು ತುಳು ಹಾಡುಗಳ ಧ್ವನಿ ಸುರುಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ವೈಭವಿ ಸ್ಟುಡಿಯೋದಲ್ಲಿ ಮುದ್ರಣಗೊಂಡ ಈ ಧ್ವನಿಸುರುಳಿಯಲ್ಲಿನ ಹಾಡುಗಳನ್ನು ಜನಾಬ್ ರ ಹೀಂ , ಅಪೋಲೋ ಅಶ್ರಫ್, ಮುಹಮ್ಮದ್ ಹನೀಫ್ ಪಲ್ರ್ಯ, ಮಲ್ಲಿಕಾ ಶೆಟ್ಟಿ, ಹಮೀದ್ ಕಡೂರು ಮತ್ತು ಬಿ.ರಾಮಚಂದ್ರ ರಾವ್ ಹಾಡಿದ್ದಾರೆ.
ಈ ನಾಟಕದ ಹಾಡುಗಳ ಧ್ವನಿ ಸುರುಳಿಯನ್ನು ಇತ್ತೀಚೆಗೆ ವೈಭವಿ ಸ್ಟುಡಿಯೋದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಸಾಹಿತಿ ಇಬ್ರಾಹಿಂ ತಣ್ಣೀರು ಬಾವಿ, ಪತ್ರಕರ್ತರಾದ ರಾಜಾ ಬಂಟ್ವಾಳ, ಮೌನೀಷ್ ವಿಶ್ವಕರ್ಮ ಮತ್ತು ಹಿರಿಯ ನಾಟಕ ರಚನಕಾರ ಬಿ.ಆರ್.ಕುಲಾಲ್ ಬಿಡುಗಡೆಗೊಳಿಸಿದರು. ಪತ್ರಕರ್ತರಾದ ಫಾರುಕ್ ಗೂಡಿನಬಳಿ, ರತ್ನದೇವ್ ಪೂಂಜಾಲ್ ಕಟ್ಟೆ ಮತ್ತು ಹಾಡುಗಾರರು ಕಲಾವಿದರು ಉಪಸ್ಥಿತರಿದ್ದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *