ಬಂಟ್ವಾಳ:ನಲಿಕೆಯವರ ಸಮಾಜ ಸೇವಾ ಸಂಘ (ರಿ ) ಬಂಟ್ವಾಳ ತಾಲೂಕು ಯುವ ವೇದಿಕೆಯ ಸಭೆಯು ವೇದಿಕೆಯ ಅಧ್ಯಕ್ಷ ರಾಘವೇಂದ್ರ ಸುರುಳಿಮೂಲೆಯವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎ ಎಸ್ ಐ ಗಂಗಾಧರಪ್ಪ ನವರಿಗೆ ಮನವಿಯೊಂದನ್ನು ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸೇರಾ ಲೋಕಯ್ಯ, ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಪಿಳಿಂಜ, ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರ ಐ ಇದ್ಪಾಡಿ, ಜಿಲ್ಲಾ ಯುವ ವೇದಿಕೆಯ ಅಧ್ಯಕ್ಷ ಕೇಶವ ಕಲಕ, ಅತಿಥಿಗಳಾಗಿ ಸುಳ್ಯ ಯುವ ವೇದಿಕೆ ಅಧಯಕ್ಷ ಸುರೇಶ್ ಏನೆಕಲ್ಲು, ಬಂಟ್ವಾಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೆನ್ನಮ್ಮ ಟೀಚರ್, ಗೋಲ್ತಮಜಲು ಗ್ರಾಮ ಪಂಚಾಯತ್ ಸದಸ್ಯೆ ಲಲಿತಾ ಮಾಣಿಮಜಲು ಇವರು ಭಾಗವಹಿಸಿದ್ದರು. ಕೇಶವ ಕಬಕ ಪ್ರಾರ್ಥಿಸಿದರು. ಸುರೇಶ್ ಕಂದೂರು ಸ್ವಾಗತಿಸಿದರು. ಕಲ್ಲಡ್ಕ ವಲಯ ಸಂಘದ ಅಧ್ಯಕ್ಷ ಪ್ರಸ್ತಾವಿಸಿದರು. ಜಿ ಎನ್ ರಾಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .