ಮೂಡುಬಿದರೆ: ಕಾರ್ಕಳ ಅಂಚೆ ಕಚೇರಿಯಿಂದ ಖಾಸಗಿ ಬಸ್ಸಿನಲ್ಲಿ ಕಳಿಹಿಸಿದ ಪಾರ್ಸೆಲೊಂದು ಜೈನ ಪೇಟೆ ಬಳಿ ರಸ್ತೆ ಬದಿ0ುಲ್ಲಿ ಸೋಮವಾರ ಸಂಜೆ ಪತ್ತೆ0ಾಗಿದೆ.
ಚಿನ್ನದ ವ್ಯಾಪಾರಿ ಹರಿಪ್ರಸಾದ್ ಎಂಬವರು ಸೋಮವಾರ ಸಂಜೆ ಬೈಕ್ ನಲ್ಲಿ  ಜೈನ್ ಪೇಟೆ ಮಾರ್ಗವಾಗಿ ಮೂಡುಬಿದಿರೆಗೆ ಬರುತ್ತಿದ್ದಾಗ ರಸ್ತೆಬದಿ0ುಲ್ಲಿ ಪಾರ್ಸೆಲ್ ಬಿದ್ದಿರುವುದನ್ನು ಗಮನಿಸಿದರು. ವಿಷ0ುವನ್ನು ಮಾಧ್ಯಮದವರ ಮೂಲಕ ಪೊಲೀಸರಿಗೆ ತಿಳಿಸಿ ನಂತರ ತನ್ನ ಸ್ನೇಹಿತ ಸೂರಜ್ ಬನ್ನಡ್ಕ ಜತೆ ಪಾರ್ಸಲನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
ಕಾರ್ಕಳ ಅಂಚೆ ಕಛೇರಿ0ು ಮೊಹರಿದ್ದ ಪಾರ್ಸಲ್ ನಲ್ಲಿ ಸೋಮವಾರದ ದಿನಾಂಕ ಮತ್ತು ಸಿಬಿಕೆ 5000311594 ರಿಜಿಸ್ತಾರ್ ಸಂಖ್ಯೆ ಇದೆ. ಒಂದು ಪಾರ್ಸಲ್ ನಲ್ಲಿ ಚಿಕ್ಕಮಗಳೂರು ಎಲ್ಲೈಸಿ ಕಛೇರಿ0ು ವಿಳಾಸ ಹಾಗೂ ಇನ್ನೊಂದು ಪಾರ್ಸ್ಲ್ ನಲ್ಲಿ ದೆಹಲಿ0ು ಕಂಪೆನೆಯೊಂದರ ವಿಳಾಸವಿದೆ. ಕಾರ್ಕಳ ಅಂಚೆಕಛೇರಿ0ುಲ್ಲಿ ಮೊಹರಾದ ಈ ಪಾರ್ಸಲನ್ನು ಕಾರ್ಕಳದಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುವ ಅಧಿಕೃತ ಅಂಚೆಮೇಲ್ ಖಾಸಗಿ ಬಸ್ಸಿನಲ್ಲಿ ಹಾಕಲಾಗಿತ್ತೆನ್ನಲಾಗಿದ್ದು ಬಸ್ಸಿನವರ ನಿರ್ಲಕ್ಷ್ಯದಿಂದ ರಸ್ತೆಗೆ ಬಿದ್ದಿರಬೇಕೆಂದು ತಿಳಿದುಬಂದಿದೆ. ಎರಡು ವಾರಗಳ ಹಿಂದೆ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಬಂಡಲ್ ಒಂದು ಮೈಲ್ ಬಸ್ಸಿನಲ್ಲಿ ಕಳುಹಿಸುವ ಸಂದರ್ಭ ಮುಡುಬಿದರೆ ಜೈನಪೇಟೆಯಲ್ಲೇ ಬಿದ್ದಿತ್ತು. ಪುರಸಭೆ, ಪೊಲೀಸರ ಮುತುವರ್ಜಿಯಲ್ಲಿ ಅದನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ರವಾನಿಸಲಾಗಿತ್ತು.

By suddi9

Leave a Reply

Your email address will not be published. Required fields are marked *