ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಅಕ್ಕರಂಗಡಿ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳ ಕಛೇರಿ ಅಧೀಕ್ಷಕ ಶೇಕ್ ಹಸನ್ ಸಾಹೇಬ್ ಇವರನ್ನು ರಾಜ್ಯ ವಕ್ ಬೋರ್ಡ್ ನೇಮಕಗೊಳಿಸಿದೆ.
ಮುಂದಿನ ಹನ್ನೊಂದು ತಿಂಗಳು ಅಥವಾ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆಯುವ ತನಕ ಈ ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.