ಪೆರ್ಮುದೆ:ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಾಶಾಭಿಷೇಕ ಎ.13ಬುಧವಾರ ದಾಮೀಕ ವಿಧಿಗಳೊಂದಿಗೆ ಜರುಗಿತು. ಧಾರ್ಮಿಕ ವಿಧಿಗಳು ಕ್ಷೇತ್ರದ ತಂತ್ರಿಗಳಾದ ಎಡಪದವು ಬ್ರಹ್ಮಶ್ರೀ ವೈ.ರಾದಾಕೃಷ್ಣ ತಂತ್ರಿ ಅವರ ನೇತ್ರತ್ವದಲ್ಲಿ ಅರ್ಚಕ ಲಕ್ಷ್ಮೀನಾರಾಯಣ ರಾವ್, ಪವಿತ್ರಪಾಣಿ ವೇಣುಗೋಪಾಲಕೃಷ್ಣ ಪೆಜತ್ತಾಯ, ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಅವರುಗಳ ಉಪಸ್ಥಿಯಲ್ಲಿ ಜರುಗುತು. ಬೆಳಗ್ಗೆ 10.20ರ ಮಿಥನ ಲಗ್ನ ಸುಮೂಹುರ್ತದಲ್ಲಿ ಶ್ರೀ ಸೋಮನಾಥೇಶ್ವರ ದೇವರಿಗೆ 108 ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಜರುಗಿತು.
ಮದ್ಯಾಹ್ನ ಮಹಾಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಜಿಣೋಧ್ಧಾರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪಾರಾಳೆಗುತ್ತು ಭುಜಂಗ ವಿ.ಶೆಟ್ಟಿ,ಗೌರವಾಧ್ಯಕ್ಷರುಗಳಾದ ವೇದವ್ಯಾಸರಾವ್, ಯಾದವ ಕೋಟ್ಯಾನ್ ಕನ್ನಿಕಾ ನಿಲಯ, ದೇವಾನಂದ ಶೆಟ್ಟಿ, ಗೌರವಸಲಹೆಗಾರಾದ ಗುರುರಾಜ ಮಾಡ, ಸುಧಾಕರ ಪೂಜಾರಿ ಮುಕ್ಕೋಡಿ, ಹಿರಿಯಣ್ಣ ಚೇಟ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಆರ್ ಶೆಟ್ಟಿ, ಕೋಶಾಧಿಕಾರಿ ಶೆಖರ ಶೆಟ್ಟಿ, ಕಲ್ಪವೃಕ್ಷ ಕಾರ್ಯದರ್ಶಿಗಳಾದ ದೀಪಕ್ ಪೆರ್ಮುದೆ, ಶ್ರೀಷರಾವ್, ಅಥಿಕ ಸಮಿತಿ ಪಂಚಾಯತ್ ಗಿರೀಶ್ ಎಮ್ ಶೆಟ್ಟಿ, ಪೆರ್ಮುದೆ ಗ್ರಾ.ಪಂ.ಅಧ್ಯಕ್ಷೆ ಸಲೋಬಾಡಿ.ಅಮೀನ್, ಉಪಾದೈಕ್ಷ ಕಿಶೋರ್ ಕೋಟ್ಯಾನ್, ಜಿ.ಪಂ.ಸದಸ್ಯೆ ವಂಸತಿ ಕಿಶೋರ್, ವೈದಿಕ ಸಮಿತಿ ಪಂಚಾಯತ್ ರಾಘವೇಂದ್ರ ರಾವ್, ಮತ್ತಿತ್ತರರು ಉಪಸ್ಥಿತರಿದ್ದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸುತೀಳ್ ಶೆರಿಗಾರ್ ಬಳಗದ ವಾದ್ಯ-ಗಾನ ವೈಭವ ಹಾಗೂ ಪ್ರಸಿದ್ಧ ಭಾಗವತರ ಕೂಡುವಿಕೆಯಲ್ಲಿ ಯಕ್ಷಗಾನ ಗಾನ ವೈಭವ ಜರುಗಿತು.

















