ಬಂಟ್ವಾಳ : ಪುರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹನ್ನೆರಡು ಮಂದಿ ಫ ಲಾನುಭವಿಗಳಿಗೆ 2015-16ನೇ ಸಾಲಿನ ತಲಾ ಮೊತ್ತ 1ಲಕ್ಷ80,000 ದ ಹಾಗೆ ಮನೆ ಮಂಜೂರಾತಿ ಪತ್ರ ವಿತರಣೆ ಹಾಗೂ ಶೇಕಡಾ7.25ರ ಯೋಜನೆಯಡಿ 25 ಮಂದಿ ಬಡ ಕುಟುಂಬಗಳ ಫ ಲಾನುಭವಿಗಳಿಗೆ ತ ಲಾ 10,000ದ ಹಾಗೆ ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ಪತ್ರ ಮತ್ತು ಶೇಕಡಾ 24.10ರ ಯೋಜನೆಯಡಿ 7ಮಂದಿ ಪರಿಶಿಷ್ಟ ಜಾತಿ ಕುಡುಂಬದ ಫ ಲಾನು ಭವಿಗಳಿಗೆ ರೂ.20,000ದ ಹಾಗೆ ಮನೆ ರಿಪೇರಿ ಬಗ್ಗೆ ಮಂಜೂರಾತಿ ಪತ್ರವನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ವಿತರಿಸಿದರು.

ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು , ಪುರಸಭಾಧಿಕಾರಿ ಸುಧಾಕರ ಭಟ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಮಂಡಾಡಿ, ಜಗ ದೀಶ್ ಕುಂದರ್, ಯಾಸ್ಮಿನ್ ಅಹ್ಮದ್, ಪ್ರಭಾ ಆರ್ ಸಾಲ್ಯಾನ್ , ಚಂಚಲಾಕ್ಷಿ , ಜೆಸಿಂತಾ, ಸಂಜೀವಿನಿ , ಭಾಸ್ಕರ ಟೈಲರ್, ಪ್ರವೀಣ್ ಕಿಣಿ, ನೊಬರ್ಟ್ ರೋಡ್ರಿಗಸ್, ಆಶ್ರಯ ಸಮಿತಿ ಸದಸ್ಯರಾದ ಸಂಜೀವ ಕುಲಾಲ್, ಖಾಸಿಂ ಪುರ ಸಭಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
