ಬಂಟ್ವಾಳ: ಮಣಿನಾಲ್ಕೂರು ಪಚ್ಚೆ ಅಂಗಳದ ಎರಡೆಕರೆಗುಡ್ಡತುಂಬಾ ಬಣ್ಣ ಬಣ್ಣದಯಕ್ಷರು, ಕಿನ್ನರರು, ಹುಲಿ, ಚಿರತೆ, ದೈವ, ಭೂತಗಳ ಕಲರವ… ಮತ್ತೆಕುಕ್ಕುದಕಟ್ಟೆ ಮರದಡಿಯ ವೇದಿಕೆ ಏರಿದ ಇವುಗಳು ನೀರಿನ ಸಮೃದ್ಧತೆ, ವಾಸ್ತವತೆ, ಸಮಸ್ಯೆ, ಪರಿಹಾರಗಳ ಕುರಿತು ಭಿನ್ನವಾದ ನಾಲ್ಕು ರಂಗ ನಾಟಕಗಳನ್ನು ನಿರೂಪಿಸುವುದರೊಂದಿಗೆÀ ಮೂರು ದಿನಗಳ ಪಚ್ಚೆಪರ್ಬ ಮಕ್ಕಳ ಬೇಸಿಗೆ ರಜಾಕಾಲದ ಪರಿಸರ ಶಿಬಿರ ಸಮಾಪನಗೊಂಡಿತು.

‘ನೀರು ನಮ್ಮ ಸಂಸ್ಕøತಿ’ ಎಂಬ ಆಶಯವನ್ನುಹೊಂದಿದ್ದಈ ಸಲದ ಶಿಬಿರವು ಹಾಡು, ಆಟ, ಬಣ್ಣ, ನಾಟಕ, ಸಂವಾದದ ಮೂಲಕ ಈ ಜ್ಞಾನವನ್ನು ಹಂಚಲು ಸಕ್ರಿಯವಾಗಿತ್ತು.ಹÀಳ್ಳಿ ಸೊಗಡಿನಆಹಾರ-ಕಷಾಯ, ನೇಲೆಚಕ್ರದ ನೇತಾಟ, ಜೋಕಾಲಿ ಜೀಕಾಟ, ಶಾಲಾ/ಕಾಲೇಜಿನ ಪಾಠ-ಪ್ರವಚನ ಮೀರಿದ ಮುಕ್ತ ಕಲಿಕೆ, ನೀರಿನ ಬಳಕೆ, ಉಳಿಕೆ ಬಗ್ಗೆ ಜ್ಞಾನತೋರುವ ಶಿಬಿರಗೀತೆ… ಇವೆಲ್ಲವೂ ಮೊದಲ ದಿನದಝಲಕ್‍ಗಳು.
ಬಾಳೆದಿಂಡಿನ ಗಾಡಿ, ಲ್ಯಾಂಪ್, ಬಂಡಿ, ರೈಲು, ಬುಲ್ಡೋಝರ್, ಕನ್ನಡಕ ಮುಂತಾದ ಆಟಿಕೆಗಳು ಕಲಾವಿದ ಶಿವಾನಂದ ಉಳಿ ಅವರ ಕೈಚಳಕದಿಂದ ತಯಾರಾದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿದ್ದುಎರಡನೆಯ ದಿನದಾರಂಭಕ್ಕೆ. ಮಿಮಿಕ್ರಿಕಲಾವಿದೆಅಕ್ಷತಾಕುಡ್ಲಆವರ ಕೈ ಬಾಯಿ ಗಂಟಲ ಬಳಕೆಯ ಮಿಮಿಕ್ರಿ ಸೇರಿದ್ದ ನೂರಾರು ಮಕ್ಕಳು ಯುವಜನರನ್ನು ಮಂತ್ರಮುಗ್ಧ ಗೊಳಿಸಿತು.ಬೆಂಗಳೂರು ಎನ್ಫೋಲ್ಡ್‍ಇಂಡಿಯಾ ಸಂಸ್ಥೆಯತರಬೇತುಗಾರ್ತಿ ಶ್ರೀಮತಿ ವಾಣಿಶ್ರೀ ಅವರು ಮಕ್ಕಳ ಮಾನಸಿಕ ದೈಹಿಕ ಸುರಕ್ಷತೆಯಅರಿವು ಮೂಡಿಸುವ ಆಟಗಳನ್ನು ನಡೆಸಿದರು.ಸಿಂಫನಿ ಮಕ್ಕಳ ಮಾಸಿಕ ಪತ್ರಿಕೆ ಬಳಗದ ಉದಯಕುಮಾರ್‍ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಮಂಜುಳಾ ಸುನಿಲ್ ಮತ್ತುತಂಡ ಹಾಡು, ಆಟಗಳನ್ನು ನಡೆಸಿಕೊಟ್ಟಿತು.ಸಂಜೆ ಶಾರದಾ ಜಿ. ಬಂಗೇರಅವರಿಂದ ಪಾರ್ದನ ಕಲಿಕೆ ಕಾರ್ಯಕ್ರಮವಿತ್ತು.
ಸ್ಥಳೀಯ ಮಕ್ಕಳೊಂದಿಗೆ ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ ಯುವಜನರು, ಅತಿಥಿಗಳು, ನೆಂಟರು, ಮಾಧ್ಯಮ ಸ್ನೇಹಿಗಳು, ರಂಗಕರ್ಮಿಗಳು, ಶಿಕ್ಷಣ ಆಸಕ್ತರು, ಸಾಮಾಜಿಕಕಾರ್ಯಕರ್ತರುಇದಕ್ಕೆ ಸಾಕ್ಷಿಯಾದರು.ರಂಗಸಾಂಗತ್ಯ ಮಣಿನಾಲ್ಕೂರು, ಅರಿವು ಪಚ್ಚೆ ಬಳಗ ಬಂಟ್ವಾಳ, ಅರಿವುಯುವ ಸಂವಾದಕೇಂದ್ರ, ದ.ಕ.ಜಿಲ್ಲೆ.ಸಂಸ್ಥೆಗಳು ಪಚ್ಚೆಪರ್ಬ 2016, ಶಿಬಿರವನ್ನು ಸಂಯೋಜಿಸಿದ್ದವು.








