ಸುಂಕದಕಟ್ಟೆ ಎಸ್ಎನ್ಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂಡುಬಿದರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ತುಳುನಾಡ ಸಿರಿ ಮದಿಪು-ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸುಂಕದಕಟ್ಟೆಯ ಎಸ್ಎನ್ಎಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ. ಮಡಂತ್ಯಾರು ಸೆಕ್ರೇಟ್ ಹಾರ್ಟ್ ಕಾಲೇಜು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಶ್ರೀಮಹಾವೀರ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ದೀಕ್ಷಿತ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಉದ್ಯಮಿ ಜೊಯ್ಲಸ್ ಡಿ’ಸೋಜ ಸಮಾರೋಪ ಭಾಷಣ ಮಾಡಿದರು. ಶ್ರೀಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ರಾಜೇಂದ್ರ ಕುಮಾರ್, ಹಳೆ ವಿದ್ಯಾರ್ಥಿಗಳಾದ ಜೀಶನ್, ರೋಹನ್ ಕರ್ಡೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ನಳಿನಿ, ಸುಲೋಚನಾ ಪಚ್ಚಿನಡ್ಕ, ಪ್ರಶಾಂತ್ ಜೈನ್, ವಿದ್ಯಾರ್ಥಿ ಸಂಯೋಜಕ ನೀಲ್ ಕೆನೆತ್ ವಾಸ್, ಶ್ವೇತಾ ಕೋಟ್ಯಾಣ್, ಗೈನಾಲ್, ಸಚ್ಚಿನ್, ರಂಜಿತ್. ಭರತ್, ಅಮರ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಹರೀಶ್ ಸ್ವಾಗತಿಸಿದರು. ವಿಜಯಲಕ್ಷ್ಮೀ ಮಾರ್ಲ ವಿಜೇತರ ವಿವರ ನೀಡಿದರು. ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕ ರಾಧಕೃಷ್ಣ ಶೆಟ್ಟಿ ವಂದಿಸಿದರು,
—