ಮೂಡುಬಿದರೆ: ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇದರ ಆಶ್ರಯದಲ್ಲಿ ಬೆಳುವಾಯಿ ದುರ್ಗಾಬೆಟ್ಟು ಅಂಜಾನಶ್ರೀ ಯ ಯಕ್ಷಕುಠೀರದಲ್ಲಿ ನಾಟ್ಯ ತರಬೇತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಉದ್ಘಾಟಿಸಿದರು.
ಆಸಕ್ತ 6 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಶಿಬಿರದಲ್ಲಿ ನಾಟ್ಯ ತರಬೇತಿ ನೀಡಿ ರಂಗ ಪ್ರವೇಶಕ್ಕೆ ಅಣಿಗೊಳಿಸುವ ಈ ಆಶಯವನ್ನು ಶ್ರೀಯಕ್ಷದೇವದ ಸ್ಥಾಪಕಾಧ್ಯಕ್ಷ ನಾಟ್ಯಗುರು ದೇವಾನಂದ ಭಟ್ ವ್ಯಕ್ತಪಡಿಸಿದರು. ಹೊಸನಗರ ಮೇಳದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಮೂಡುಬಿದರೆ ಸಂಯೋಜಿಸಿದರು. ರಮೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು, ಬಳಿಕ ಮಕ್ಕಳಿಗೆ ನಾಟ್ಯ ತರಬೇತಿ ನೀಡಲಾಯಿತು


mbd_apri16_9

By suddi9

Leave a Reply

Your email address will not be published. Required fields are marked *