ಬಂಟ್ವಾಳ: ಇಲ್ಲಿನ ತಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಉಳ್ಳಾಲ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಾಣೆಮಂಗಳೂರು ಕ್ಷೇತ್ರದ ಅಬ್ಬಾಸ್ ಆಲಿ ಎ.ಸಿ.ಡಾ| ಆಶೋಕ್ ಅವರಲ್ಲಿ ತಾ.ಪಂ.ನ ಎಸ್ ಜಿಆರ್ ಎಸ್ ವೈ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ ಪುರಂದರ ಹೆಗ್ಡೆ ಮತ್ತು ತಾ.ಪಂ.ಕಾರ್ಯ ನಿರ್ವಹಾಣಾಧಿಕಾರಿ ಸಿಪ್ರಿಂಯಾನ್ ಮಿರಾಂದ ಉಪಸಿತರಿದ್ದರು.

