ಬಂಟ್ವಾಳ; ಶಿವಮೊಗ್ಗಕ್ಕೆ ಪ್ರವಾಸಕ್ಕೆಂದು ತೆರಳಿದ ಸ್ನೇಹಿತರಿಬ್ಬರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ಸಜಿಪಮೂಡ ಗ್ರಾಮದ ನಡಿಲಗುತ್ತು ನಿವಾಸಿ ಸತೀಶ್ ಮೆಲ್ವಿನ್ ಲೂವಿಸ್(36) ಹಾಗೂ ಅವರ ಸ್ನೇಹಿತ ಗ್ಲಾನ್ ವಿಶಾಲ್ ಡಿ’ಸೋಜ(31) ನಾಪತ್ತೆಯಾದವರು. ಪ್ರಕರಣದ ಬಗ್ಗೆ ಸತೀಶ್ ಮೆಲ್ವಿನ್ ರವರ ಪತ್ನಿ ಪ್ಲೇವಿಯಾ ರವರು ನಗರ ಠಾಣೆಗೆ ದೂರು ನೀಡಿದ್ದು, ತನ್ನ ಪತಿ ಹಾಗೂ ಅವರ ಸ್ನೇಹಿತನನ್ನು ಪತ್ತೆ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ತನ್ನ ಪತಿ ಹಾಗೂ ಅವರ ಸ್ನೇಹಿತ ಮೇ.6 ರಂದು ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ತೆರಳಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಕರೆ ಮಾಡಿದ ತನ್ನ ಪತಿ ಶಿವಮೊಗ್ಗದಿಂದ ವಾಪಾಸು ಬರುತ್ತಿದ್ದು, ಕೊಪ್ಪದಲ್ಲಿರುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೆ ಇಬ್ಬರೂ ವಾಪಸು ಬಂದಿಲ್ಲ ಎಂದವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

satish

vishal

 

By suddi9

Leave a Reply

Your email address will not be published. Required fields are marked *