ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ನದಿ ಸಂರಕ್ಷಣ ಸಂಯುಕ್ತ ಸಮಿತಿ ಮೇ 16ರಂದು ನಡೆಸುವ ಬೃಹತ್ ಪ್ರತಿಭಟನಾ ಜಾಥ ಹಾಗೂ ಮೇ19 ರಂದು ನಡೆಸುವ ದ.ಕ.ಜಿಲ್ಲಾ ಬಂದ್ಗೆ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಬಂಟ್ವಾಳ ತಾಲೂಕು ಘಟಕ ಬೆಂಬಲ ವ್ಯಕ್ತಪಡಿಸಿದೆ ಎಂದು ಘಟಕದ ಕಾರ್ಯದರ್ಶಿ ಲಕ್ಷ್ಮಣ ಕುಲಾಲ್ ಅಗ್ರಬೈಲು ತಿಳಿಸಿದ್ದಾರೆ.