ಬಂಟ್ವಾಳ : ಕಸ್ಬಾ ಗ್ರಾಮದ ಕಂದಾಯ ನಿರೀಕ್ಷಕರಾದ ಆಸಿಫ್ ಇಕ್ಬಾಲ್ ರವರು ಮಣಿ ದುರ್ಗಾ ಮಾತಾ ದೇವಸ್ಥಾನ ಟ್ರಸ್ಟ್ ನ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ವಿಶ್ವನಾಥ ಗೌಡ ಮಣಿ ಯವರ ಮೇಲೆ ಹಲ್ಲೆ ನಡೆಸಿ ಹಾಗೂ ದೇವಳದ ಬಗ್ಗೆ ಲಘುವಾಗಿ ಮಾತನಾಡಿ ನಮ್ಮ ಧಾರ್ಮಿಕ ಭಾವನೆಗೆ ನೋವುಂಟುನಾಡಿದ ಕಂದಾಯ ನಿರೀಕ್ಷಕರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕೆಂದು ದುರ್ಗಾ ಮಾತಾ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಪೂಜಾರಿ ಯವರು ತಹಶೀಲ್ದಾರ್ ಪುರಂಧರ ಹೆಗ್ಡೆಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಕಾರ್ಯದರ್ಶಿ ಯಶೋಧರ ಜಕ್ರಿಬೆಟ್ಟು, ಅರ್ಚಕ ಬಾಬುಗೌಡ ಮಣಿ , ಚರಣ್ ರಾಜ್ , ಯತಿನ್, ಲೋಹಿತ್, ನಿತಿನ್, ಬಾಲಕೃಷ್ಣ ಗೌಡ, ಜನಾರ್ಧನ ಕುದನೆ ಉಪಸ್ಥಿತರಿದ್ದರು.
