ಬಂಟ್ವಾಳ; 610 ಅಂಕದ ನಿರೀಕ್ಷೆಯಲ್ಲಿದ್ದೆ, ಆದರೆ 622 ಅಂಕ ದೊರೆತಿರುವುದು ನನಗೆ ತುಂಬಾ ಖೂಷಿ ತಂದಿದೆ ಎಂದು ಬಂಟ್ವಾಳ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಮೇಘನಾ ಪೈ ತಿಳಿಸಿದ್ದಾಳೆ. ಬಂಟ್ವಾಳದ ಜಿ.ಕೃಷ್ಣಾನಂದ ಪೈ ಹಾಗೂ ಎ.ನಂದಿತಾ ಪೈ ದಂಪತಿಗಳ ಪುತ್ರಿ ಯಾಗಿರುವ ಮೇಘನಾ, ತಾನು ಮುಂದೆ ಕಾಮರ್ಸ್ ಆಯ್ಕೆ ಮಾಡಿಕೊಳ್ಳುತ್ತೇನೆ ಸಿ.ಎ. ಆಗಬೇಕು ಎನ್ನುವ ಆಸೆ ಇದೆ ಎಂದು ಅನಿಸಿಕೆ ಹಂಚಿಕೊಂಡಿದ್ದಾಳೆ. ಮನೆಮಂದಿಯ ಪ್ರೋತ್ಸಾಹ, ಶಾಲಾ ಶಿಕ್ಷಕರ ಸಹಕಾರ ದಿಂದ ಈ ಸಾಧನೆ ಸಾಧ್ಯವಾಗಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮೇಘನಾ ತಿಳಿಸಿದ್ದಾಳೆ.
