ದೀನ-ದಲಿತರು ದುರ್ಬಲರಿಗೆ ನೀಡಿದ ಸಾಲ ಪೂರ್ಣ ಮರುಪಾವತಿಯಾಗುತ್ತದೆ.

ಧರ್ಮಸ್ಥಳದಲ್ಲಿ ಸೋಮವಾರ ಐ.ಡಿ.ಬಿ.ಐ. ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಖಾರಟ್ 581 ನಿರ್ಗತಿಕ ಕುಟುಂಬಗಳಿಗೆ 37 ಲಕ್ಷ ರೂ. ಮಾಸಾಶನ ವಿತರಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು. ( 16 ಉಜಿರೆ 2)

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಾಡಿದ ಸಾಧನೆ, ಪ್ರಗತಿ, ಆರ್ಥಿಕ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣ ದೇಶಕ್ಕೆ ಮಾದರಿಯಾಗಿದೆ ಹಾಗೂ ಅನುಕರಣೀಯವಾಗಿದೆ ಎಂದು ಐ.ಡಿ.ಬಿ.ಐ. ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಖಾರಟ್ ಹೇಳಿದರು.
ಧರ್ಮಸ್ಥಳದಲ್ಲಿ ಸೋಮವಾರ 581 ನಿರ್ಗತಿಕ ಕುಟುಂಬಗಳಿಗೆ 37 ಲಕ್ಷ ರೂ. ಮಾಸಾಶನ ವಿತರಿಸಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ಬ್ಯಾಂಕ್‍ಗಳು ಸ್ವ-ಸಹಾಯ ಸಂಘಗಳಿಗೆ ಐದು ಸಾವಿರ ಕೋಟಿ ರೂ. ಸಾಲ ನೀಡಿವೆ. ದೀನ-ದಲಿತರು, ದುರ್ಬಲ ವರ್ಗದವರು ವಿಶ್ವಾಸಾರ್ಹರು ಹಾಗೂ ಅವರಿಗೆ ನೀಡಿದ ಸಾಲ ಶೇ. ನೂರರಷ್ಟು ವಸೂಲಾತಿ ಆಗುತ್ತದೆ.

16ujire1 (1) 16ujire1

20160516043159_IMG_8049

20160516045232_IMG_8090
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಶಿಸ್ತು, ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲೀಕರಣ ಪಡೆದು ಸ್ವಾವಲಂಬಿ ಜೀವನ ನಡೆಸಬಹುದು ಎಂದು ಧರ್ಮಸ್ಥಳ ಯೋಜನೆ ಸಾಧಿಸಿ ತೋರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಫಲಾನುಭವಿ ಚಂಪಾ ತನ್ನ ಅನಿಸಿಕೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪರಾವಲಂಬನೆ ಸಲ್ಲದು. ಸರ್ಕಾರ ಹಾಗೂ ವಿವಿಧ ಸಂಘಟನೆಗಳ ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬನೆಯೊಂದಿಗೆ ಫಲಾನುಭವಿಗಳು ಸ್ವತಂತ್ರ ಜೀವನ ನಡೆಸಬೇಕು. ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳಾ ಸಬಲೀಕರಣವಾಗಿ ಈಗ ಮಹಿಳೆಯರು ಪ್ರಗತಿಪರ ಚಿಂತನೆಯೊಂದಿಗೆ ಗೃಹಾಡಳಿತ ನಡೆಸಿ ವ್ಯವಹಾರ ತಜ್ಞರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈಗ ಸಾಮಾಜಿಕ ಪರಿವರ್ತನೆಯಾಗಿದ್ದು ಪುರುಷರು ಮತ್ತು ಮಹಿಳೆಯರು ಸಮಾನ ಮನಸ್ಕರಾಗಿ ಸಂಸಾರ ಮತ್ತು ಸಮಾಜವನ್ನು ಮುನ್ನಡೆಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಐ.ಡಿ.ಬಿ.ಐ. ಮುಖ್ಯ ಪ್ರಬಂಧಕರಾದ ನಾರಾಯಣಮೂರ್ತಿ, ಶ್ರೀನಿವಾಸನ್, ಸುರೇಶ್ ಮತ್ತು ಹಿರಿಯ ಅಧಿಕಾರಿ ಡಿಂಪಲ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ರೂಪಾ ಜೈನ್ ಧನ್ಯವಾದವಿತ್ತರು. ಮಮತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಶಂಕರ್ ಟಿ.ವಿ. ಭಜನಾ ಸ್ಪರ್ಧೆ: ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲ ಉಪಾಂತ್ಯ ಸ್ಪರ್ಧೆಗೆ ಆಯ್ಕೆ.
ಚಿತ್ರಶೀರ್ಷಿಕೆ: ಕನ್ಯಾಕುಮಾರಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆ ಹೇಮಾವತಿ ಹೆಗ್ಗಡೆಯವರೊಂದಿಗೆ ವಿಜೇತ ಸ್ಪರ್ಧಿಗಳು (16 ಉಜಿರೆ 1)

ಉಜಿರೆ: ಶಂಕರ್ ಟಿ.ವಿ. ಭಜನಾ ಸ್ಪರ್ಧೆಯಲ್ಲಿ ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಚೆನೈನಲ್ಲಿ ನಡೆಯುವ ಉಪಾಂತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಮತಾ ರಾವ್, ಮಂಜುಳಾ, ಸಾಧನಾ, ರಮ್ಯಾ, ಸ್ವರ್ಣಾಗೌರಿ, ಭವಾನಿ ಮತ್ತು ಕುಸುಮಾ ಉಪಾಂತ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *