ಬಂಟ್ವಾಳ: ಗ್ರಾಮೀಣ ಪ್ರದೇಶದ ಎಲ್ಲಾ ದುಡಿಯುವ ಜನರ ಕೈಗೆ ಕೆಲಸ ನೀಡಿದಾಗ ಗಾಂಧೀಜಿಯ ಗ್ರಾಮಾಭಿವೃದ್ದಿಯ ಕನಸು ನನಸಾಗಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾದವೆ ಮಾವೆ ತಿಳಿಸಿದರು. ಅವರು ವೀರಕಂಭ ಗ್ರಾ.ಪಂ.ನಲ್ಲಿ ನಡೆದ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಖಾತರಿಯ ಯೋಜನೆಯ ಸರಿಯಾದ ಮಾಹಿತಿಯನ್ನು ನೀಡಿ ಜನರು ಅದರ ಸೌಲಭ್ಯವನ್ನು ಸಮರ್ಪಕವಾಗಿ ಪಡೆಯುವ ವಲ್ಲಿ ಗ್ರಾ.ಪಂ.ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಕೈಜೊಡಿಸಿ ಎಂದು ಕರೆ ನೀಡಿದರು. ಅಧಿಕಾರಿಗಳು ಉದಾಸೀನ ತೋರದೆ ಸಾರ್ವಜನಿಕರಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಂಡಾಗ ವೀರಕಂಭ ಗ್ರಾಮದ ಅಭಿವೃದ್ದಿ ಸಾಧ್ಯ ಎಂದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ಗೀತಾ ಚಂದ್ರಶೇಖರ್,ಸಂಪನ್ಮೂಲ ವ್ಯಕ್ತಿ ಬಂಟ್ವಾಳ ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕಿ ದಯಾವತಿ, ವೀರಕಂಭ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ನಿಶಾಂತ್ ರೈ, ಎನ್ ಆರ್.ಇ.ಜಿ.ತಾಂತ್ರಿಕ ಇಂಜಿನೀಯರ್ ಆಶ್ವಿನ್, ಎನ್ ಆರ್.ಇ.ಜಿ ತಾಲೂಕು ಸಂಯೋಜಕ ಮಂಜು ವಿಟ್ಲ ಉಪಸಿತರಿದ್ದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ದೇವಪ್ಪ ಸ್ವಾಗತಿಸಿ ವಂದಿಸಿದರು.