ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ಹಾಗೂ ಯೋಗ ತರಬೇತಿ ತರಗತಿಗಳು ಶುಕ್ರವಾರದಿಂದ ಆರಂಭಗೊಂಡಿತು. ಉದ್ಯಮಿ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಸೋಮಪ್ಪ ಮಡಿವಾಳ ರಾಯಿ, ಅಶೋಕ್ ಬಂಟ್ವಾಳ, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ, ಸಹ ಶಿಕ್ಷಕಿ ಹಿಲ್ಡಾ ಫೆರ್ನಾ ಡೀಸ್, ಉಮಾವತಿ, ಗೋಪಾಲ್ ಮಣಿಹಳ್ಳ, ಉಪಸ್ಥಿತರಿದ್ದರು.

ಯೋಗದ ಬಗ್ಗೆ ಸೋಮಪ್ಪ ಮಡಿವಾಳ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಕರಾಟೆಯ ಬಗ್ಗೆ ಅಶೋಕ್ ಬಂಟ್ವಾಳ ತಿಳಿಸಿಕೊಟ್ಟರು. ಮುಚ್ಚುಗಡೆಯ ಭೀತಿಯಲ್ಲಿದ್ದ ಶಾಲೆಯಲ್ಲಿ ಈಗ 218 ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ಮೂಲಕ ದಾಖಲೆ ಬರೆದಿದೆ.