ಬಂಟ್ವಾಳ: ತಾಲೂಕಿನ ಪುದು ಹಾಗೂ ಮೇರಮಜಲು ಗ್ರಾ.ಪಂವ್ಯಾಪ್ತಿಯಲ್ಲಿ ಅನಿಮಿಯತ ಲೋಡ್ ಶೆಡ್ಡಿಂಗ್ ನಿಂದ ಗ್ರಾಮಸ್ಥರು ಕಳೆದ ಹಲವಾರು ದಿನಗಳಿಂದ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಮೆಸ್ಕಾಂನ ಕಾರ್ಯನರ್ವಾಹಕ ಎಂಜಿನಿಯರ್ ಉಮೇಶ್ಚಂದ್ರ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಬಿ.ಸಿ.ರೋಡಿನ ಕೈಕಂಬದಲ್ಲಿ ಕಚೇರಿ ಹೊಂದಿರುವ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ಚಂದ್ರ ಅವರನ್ನು ಭೇಟಿ ಮಾಡಿದ ಪಂಚಾಯಿತಿ ಪ್ರತಿನಿಧಿಗಳು ವಿದ್ಯುತ್ ವ್ಯತ್ಯದಿಂದಾಗಿ ಜನರಿಗಾಗುತ್ತಿರುವ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಫರಂಗಿಪೇಟೆ ವ್ಯಾಪ್ತಿಯಲ್ಲಿ ಎಕ್ಸ್ಪ್ರೆಸ್ ಲೈನ್ ಹಾದು ಹೋಗಿದ್ದರೂ, ಅಲ್ಲೇ ಸೆಕ್ಷನ್ ಕಚೇರಿ ಇದ್ದರೂ ಕೂಡ ಕಳೆದ ಮೂರು ವಾರಗಳಿಂದ ರಾತ್ರಿ 7 ಗಂಟೆಗೆ ಕೈಕೊಡುವ ವಿದ್ಯುತ್ ಮರುದಿನ ಮಧ್ಯಾಹ್ನದ ವೇಳೆಗೆ ಪ್ರತ್ಯಕ್ಷವಾಗುತ್ತದೆ. ಈ ಸಮಸ್ಯೆ ನಿರಂತರವಾಗಿ ಮುಂದುವರಿದುಕೊಂಡು ಬಂದಿದ್ದು ಮೆಸ್ಕಾಂನ ಅಧೀನ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜವಾಗಿರಲಲ್ಲಿ. ರಂಜಾನ್ ಉಪವಾಸ ಹಾಗೂ ಮಳೆಗಾಲ ಆರಂಭಗೊಂಡಿರುವ ಹಿನ್ನಲೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಉಮ್ಮರ್ ಫಾರೂಕ್ ಎಂಜಿನಿಯರ್ ಅವರಲ್ಲಿ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಎಂಜಿನಿಯರ್ ಉಮೇಶ್ಚಂದ್ರ ಅವರು ಮುಂದಿನ ಒಂದು ವಾರದೊಳಗಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರಲ್ಲದೆ ಕರ್ತವ್ಯ ನಿರ್ವಹಣೆಗೆ ಹೆಚ್ಚುವರಿ 3 ಲೈನ್ಮ್ಯಾನ್ ಹಾಗೂ ಸರ್ವೇಸ್ ವಾಹನವನ್ನು ಒದಗಿಸುವುದಾಗಿ ತಿಳಿಸಿದರು. ಫರಂಗಿಪೇಟೆ ವಿಭಾಗೀಯ ಕಚೇರಿಯಲ್ಲಿ ವಾರದದಲ್ಲಿ ಒಂದು ದಿನ ಮಾತ್ರ ಬಿಲ್ ಸಂಗ್ರಹ ಮಾಡುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಪಡವಂತಾಗಿದ್ದು ಈ ನಿಟ್ಟಿನಲ್ಲಿ ವಾರದ ಎರಡು ದಿನ ಬಿಲ್ ಸಂಗ್ರಹವನ್ನು ವಿಸ್ತರಣೆ ಮಾಡಬೇಕೆಂದು ಇದೇ ಸಂದರ್ಭ ಎಂಜಿನಿಯರ್ ಅವರನ್ನು ಉಮ್ಮರ್ ಫಾರೂಕ್ ಆಗ್ರಹಿಸಿದರು.
ಸಹಾಯಕ ಕಾರ್ಯನಿವರ್ಾಹಕ ಎಂಜಿನಿಯರ್ ನಾರಾಯಣ ಭಟ್, ಪುದು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯರಾದ ರಮ್ಲಾನ್, ದುಗರ್ೇಶ್ ಶೆಟ್ಟಿ, ಝಾಹೀರ್, ಇಕ್ಬಾಲ್ ಮಾರಿಪಳ್ಳ, ಹಕೀಂ ಮಾರಿಪಳ್ಳ, ರಫೀಕ್, ಮಜೀದ್ ಫರಂಗಿಪೇಟೆ, ಎಂ.ಕೆ.ಮಹಮ್ಮದ್, ಅಶ್ವದ್ ಮತ್ತಿತರರು ಉಪಸ್ಥಿತರಿದ್ದರು.