ಬಂಟ್ವಾಳ : ಪುದುಗ್ರಾಮದ ಫರಂಗಿಪೇಟೆ ರೈಲ್ವೇ ಟ್ರ್ಯಾಕ್ ಬಳಿಯ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಲೋಡ್ ಮರಳು ಹಾಗೂ ಒಂದು ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ.15 ರ ಬಳಿಕ ಮರಳುಗಾ ರಿಕೆ ಸ್ಥಗಿತ ಹಾಗೂ ಹೊರ ಜಿಲ್ಲೆಗೆ ಸಾಗಾಟ ನಿಷೇಧದ ಹಿನ್ನೆಲೆಯಲ್ಲಿ ಕೆಲ ಮರಳುಸಾಗಾಟಗಾರರು ಖಾಲಿ ಖಾಲಿ ಜಮೀನಿನಲ್ಲಿ ಮರಳು ಸಂಗ್ರಹಿಸಿರುವ ಬಗ್ಗೆ ಸ್ಥಳೀಯರು ಗಣಿ ಇಲಾಖೆಗೆ ದೂರು  ನೀಡಿದ್ದರು.IMG-20160616-WA0106

ಈ ಹಿನ್ನೆಲೆಯಲ್ಲಿ ಗುರುವಾರ ಫರಂಗಿಪೇಟೆಯ ಖಾಲಿ ಜಮೀನಿಗೆ ದಾಳಿ ನಡೆಸಿದ ಗಣಿ ಇಲಾಖಾ ಅಧಿಕಾರಿ ಗಿರೀಶ್ ಮೋಹನ್, ಸುಮಾರು 25 ಲೋಡ್ ಗಳಷ್ಟು ಮರಳನ್ನು ವಶಪಡಿಸಿಕೊಂಡಿದ್ದು, ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಉಮೇಶ್ ಭಟ್, ಅರುಣ್ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *