ಬಂಟ್ವಾಳ:ತಾಲ್ಲೂಕಿನ ಫರಂಗಿಪೇಟೆ ನೇತ್ರಾವತಿ ನದಿ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 25 ಲೋಡ್ ಮರಳು ಮತ್ತು ಒಂದು ಲಾರಿಯನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಗಿರೀಶ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡವು ಶುಕ್ರವಾರ ಸಂಜೆ ವಶಪಡಿಸಿಕೊಂಡ ಘಟನೆ ನಡೆದಿದೆ.
ಇದೇ 15ರ ಬಳಿಕ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಅಪಾರ ಪ್ರಮಾಣದ ಮರಳು ಸಂಗಹಿಸಿಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಇಲಾಖಾ ಅಧಿಕಾರಿಗಳಿಗೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿದ್ದು, ಬಂಟ್ವಾಳ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್, ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್, ಎಂಜಿನಿಯರ್ ಗೋಪಾಲ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

18btl-Maralu
ಸಾಗಾಟಕ್ಕೆ ಅಡ್ಡಿ:
ಫರಂಗಿಪೇಟೆ ನೇತ್ರಾವತಿ ನದಿ ಬಳಿ ಅಕ್ರಮವಾಗಿ ಸಂಗ್ರಹಿಡಿಸಲಾಗಿದ್ದ ಮರಳು ವಶಪಡಿಸಿಕೊಂಡ ಕೂಡಲೇ ಜೆಸಿಬಿ ಮೂಲಕ ಲಾರಿಗೆ ತುಂಬಿಸಿ ಒಟ್ಟು 13ಲೋಡ್ ಮರಳನ್ನು ಇಲ್ಲಿನ ಬಿ.ಸಿ.ರೋಡ್ ಪಿಡಬ್ಲ್ಯುಡಿ ಮರಳು ಸಂಗ್ರಹಣಾ ಕೇಂದ್ರಕ್ಕೆ ಶುಕ್ರವಾರ ರಾತ್ರಿತನಕವೂ ಸಾಗಿಸಲಾಯಿತು. ಉಳಿದಂತೆ ಬಾಕಿ ಉಳಿದಿದ್ದ ಸುಮಾರು 12ಲೋಡ್ ಮರಳು ತರಲು ಶನಿವಾರ ಹೋಗುತ್ತಿದ್ದಂತೆಯೇ ಕೆಲವೊಂದು ಕಿಡಿಗೇಡಿಗಳು ಜಮಾಯಿಸಿ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದರು ಎನ್ನಲಾಗಿದೆ. ಇದೇ ವೇಳೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಗುಂಪು ಚದುರಿಸಿದರು ಎಂದು ತಿಳಿಸಿದ್ದಾರೆ.
—

By suddi9

Leave a Reply

Your email address will not be published. Required fields are marked *