ಮಂಗಳೂರು : ರಂಜಾನ್ 12 ಶುಕ್ರವಾರ ಜುಮಾ ನಮಾಜು ಬಳಿಕ ಪಂಪ್ವೆಲ್ ತಖ್ವಾ ಮಸೀದಿಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಗಳ್ ಅಲ್ ಬುಖಾರಿ ಬಾಯಾರ್ ರಂಜಾನ್ ಪ್ರಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಒಬ್ಬ ಮುಸ್ಲಿಮನು ಸಂಶುದ್ಧನಾದ ಸತ್ಯವಿಶ್ವಾಸಿಯಾಗಬೇಕಾದರೆ ಅರಾಜಕತೆ,ಅನೈತಿಕತೆ ಹಾಗೂ ಎಲ್ಲಾ ಕೆಡುಕುಗಳಿಂದಲೂ ದೂರವಿರಬೇಕೆಂದು ಹೇಳಿದರು ಮಾತ್ರವಲ್ಲ ಒಬ್ಬ ಮುಸಲ್ಮಾನನ ಉಪವಾಸ ಅಲ್ಲಾಹನ ಬಳಿ ಸ್ವೀಕಾರಾರ್ಹವಾಗಬೇಕಾದರೆ ಕೇವಲ ಹೊಟ್ಟೆ ಹಸಿವಿನಿಂದ ಇದ್ದರೆ ಮಾತ್ರ ಸಾಲದು ಅವನ ಸಂಪೂರ್ಣ ಶರೀರದ ಚಲನವಲನ ಗಳು ಉಪವಾಸದಲ್ಲಿರಬೇಕು.
ಅರಾಜಕತೆ ಅನೈತಿಕತೆಗೆ ಆಸ್ಪದ ನೀಡಬಾರದು.ಅಪಹಾಸ್ಯ,ಪರನಿಂದನೆ ಪರದೂಷಣೆ ಮಾಡಬಾರದು.ವಾಟ್ಸಪ್ ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಕಾರ್ಯಗಳು ಹೆಚ್ಚಾಗಿ ನಡೆಯುತಿದೆ ಅದಕ್ಕೆ ಕಡಿವಾಣ ಹಾಕಬೇಕೆಂದು ಸಮುದಾಯಕ್ಕೆ ಕರೆ ನೀಡಿ ದುವಾ ನೆರವೇರಿಸಿದರು.ಸಹಸ್ರಾರು ಸಂಖ್ಯೆಯಲ್ಲಿ ಸತ್ಯವಿಶ್ವಾಸಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ತಖ್ವಾ ಮಸೀದಿ ಸಾರಥಿಗಳಾದ ಎಸ್ ಎಂ ಆರ್ ರಶೀದ್ ಹಾಜಿ,ಮಮ್ತಾಝ್ ಅಲಿ ಕ್ರಷ್ಣಾಪುರ,ತಖ್ವಾ ಮಸೀದಿ ಖತೀಬ್ ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು
