ಬಂಟ್ವಾಳ: ಬೆಂಜನಪದವಿನ ಕಲ್ಪನೆ ರಿಕ್ಷಾ ಪಾರ್ಕಿಂಗ್ ನಲ್ಲಿ ಹಾಡು ಹಗಲೇ ಕೊಲೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ರಾಜೇಶ್ ಪೂಜಾರಿ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಗುರುವಾರ ಬೆಳಿಗ್ಗೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

  Ashok Shetty Sarapady

ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಮುಗ್ದರೆಂದು ಬಿಂಬಿಸಿ ಅವರ ಬಿಡುಗಡೆಗೆ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮಾರಣ ಹೋಮ ನಡೆಯುವ ಸಾಧ್ಯತೆಗಳಿವೆ. ಆರೋಪಿಗಳಿಗೆ ಬೆಂಬಲ ಹಾಗೂ ಧನಸಹಾಯ ನೀಡುತ್ತಿರುವ ನೈಜ ಆರೋಪಿಗಳ ಬಂಧನವಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಪೊಲೀಸ್ ವೃತ್ತ ನಿರೀಕ್ಷ ಬೆಳಿಯಪ್ಪ ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು. ವಿಹಿಂಪ ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಕಾರ್ಯದರ್ಶಿ ವಿಜೇತ್ ತುಂಬೆ, ಬಜರಂಗದಳ ಸಂಯೋಜಕ ಗುರುರಾಜ್ ಪ್ರಮುಖರಾದ ಭುವಿತ್ ಶೆಟ್ಟಿ, ಚೇತನ್ ತುಂಬೆ, ಪ್ರಣಮ್, ಮಹೇಶ್ ಅಜ್ಜಿಬೆಟ್ಟು, ಸಂತೋಷ್ ಸರಪಾಡಿ, ಧನರಾಜ್, ಅಶ್ವಿತ್, ವಿವೇಕ್ ರಾಜ್ ಇದ್ದರು.

By suddi9

Leave a Reply

Your email address will not be published. Required fields are marked *