ಬಂಟ್ವಾಳ: ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಎಂಬ ಧ್ಯೇಯ ವಾಕ್ಯದಡಿ ಇದೇ 20ರಿಂದ 28ರತನಕ ತಾಲ್ಲೂಕಿನಾದ್ಯಂತ ‘ಕೃಷಿ ಅಭಿಯಾನ’ ನಡೆಯಲಿದೆ.
ಇದೇ 20ರಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನಲ್ಲಿ ಆರಂಭಗೊಳ್ಳಲಿರುವ ಬಂಟ್ವಾಳ ಹೋಬಳಿ ಕೃಷಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡುವರು. ಇದೇ 23ರಂದು ಪಾಣೆಮಂಗಳೂರು ಹೋಬಳಿಯಲ್ಲಿ ಆರಂಭಗೊಳ್ಳಲಿರುವ ಕೃಷಿ ಅಭಿಯಾನಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಚಾಲನೆ ನೀಡಲಿದ್ದು, ಇದೇ 26ರಿಂದ ನಡೆಯಲಿರುವ ವಿಟ್ಲ ಹೋಬಳಿ ಕೃಷಿ ಅಭಿಯಾನಕ್ಕೆ ಶಾಸಕಿ ಟಿ.ಶಕುಂತಳಾ ಶೆಟ್ಟಿ ಚಾಲನೆ ನೀಡುವರು.
ಈ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೆ ಅಭಿಯಾನ ವಾಹನ ಭೇಟಿ ನೀಡಲಿದ್ದು, ಕೆಲವೆಡೆ ರೈತರೊಂದಿಗೆ ಸಂವಾದ ನಡೆಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.