ಮಂಗಳೂರು:ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘ (ರಿ) ದ.ಕ ಮತ್ತು ಉಡುಪಿ ಜಿಲ್ಲೆ ಇದರ ಮಹಾಸಭೆಯು ಜು.3 ರಂದು ಭಾನುವಾರ ಮಂಗಳೂರಿನ ಮಲ್ಲಿಕಟ್ಟೆ  ಸುಮ ಸದನದಲ್ಲಿ ನಡೆಯಿತು. ವೇದಿಕೆಯಲ್ಲಿ ಈಶ್ವರ ಸಾಲಿಗ್ರಾಮ, ಷಣ್ಮುಗಂ ಮಂಗಳೂರು , ಈಶ್ವರ ಕಟಪಾಡಿ,ಚಿನ್ನಸ್ವಾಮಿ ಮಿಯಾರ್,ಜಗದೀಶ ಪರ್ಕಳ ಹಾಗೂ ಸುಬ್ರಹ್ಮಣ್ಯ ಅಸೋಡ್ ಇವರು ಉಪಸ್ಥಿತರಿದ್ದರು. ಎಸ್‍ಎಸ್‍ಎಲ್‍ಸಿ, ಪಿ.ಯು.ಸಿ ಹಾಗೂ ಎಂಜಿನಿಯರಿಂಗ್‍ನಲ್ಲಿ 80% ಗಿಂತ ಅಧಿಕ ಅಂಕ ಗಳಿಸಿದ ಒಟ್ಟು ಹತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

6 vp bhovi  varsika mha sabe
2016-17ನೇ ಸಾಲಿನ ಅಧ್ಯಕ್ಷರಾಗಿ ಈಶ್ವರ ಸಾಲಿಗ್ರಾಮ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಷಣ್ಮುಗಂ ಮಂಗಳೂರು, ಈಶ್ವರ ಕಟಪಾಡಿ, ಚಿನ್ನಸ್ವಾಮಿ ಮಿಯಾರ್, ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ಅಸೋಡ್, ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ ಪರ್ಕಳ, ಜೊತೆ ಕಾರ್ಯದರ್ಶಿಗಳಾಗಿ ರಾಜೇಂದ್ರ ಕಿನ್ನಿಕಂಬಳ,ಶ್ರೀನಿವಾಸ ದೂಪದಕಟ್ಟೆ, ಕೋಶಾಧಿಕಾರಿಯಾಗಿ ಗಣೇಶ್ ಬೋಯಾನ್, ಜೊತೆ ಕೋಶಾಧಿಕಾರಿಯಾಗಿ ನಾರಾಯಣ ಬೋಂದೆಲ್, ಕ್ರೀಡಾ ಕಾರ್ಯದರ್ಶಿಗಳಾಗಿ ಲೋಹಿತ್ ಪಕ್ಷಿಕೆರೆ, ಕರ್ಣ ದೂಪದಕಟ್ಟೆ, ಸಂಘಟನಾ ಕಾರ್ಯದರ್ಶಿಗಳಾಗಿ ಸೆಲ್ವಾ ಕುಮಾರ್ ಬಲ್ಮಠ,ಚಂದ್ರಕಾಂತ್ ಮಂಗಳೂರು, ವಿಜಯಾಕುಮಾರ್ ಪೆರ್ಡೂರು, ಗಣೇಶ ಉಲ್ಲೂರು, ಪಧಾದಿಕಾರಿಗಳಾಗಿ ವೀರಸ್ವಾಮಿ ಬೋಂದೆಲ್, ಹರೀಶ ಪಕ್ಷಿಕೆರೆ, ಮಾರಸ್ವಾಮಿ ಎನ್‍ಎಮ್‍ಪಿಟಿ, ಶಿವಾನಂದ ಕಲ್ಲಡ್ಕ, ರವಿ ಮೂಡಬಿದ್ರೆ, ಲಕ್ಷ್ಮೀಕಾಂತ್ ಕಬಕ, ಜ್ಯೋತಿ ಮೆಸ್ತ್ರೀ ಸುಳ್ಯ, ಮಹೇಂದ್ರ ಕಾರ್ಕಳ, ಉಮೇಶ್ ಕಾಬೆಟ್ಟು, ದಂಡಪಾಣಿ ಕಾರ್ಕಳ, ನಾಗರಾಜ ಮೂಡ್ಲಕಟ್ಟೆ, ಜಗದೀಶ ಕೆದೂರು, ಸಂತೋಷ್, ಶಿವ ಕುಮಾರ್ ಪರ್ಕಳ, ವಾಣಿ ಮಾರಸ್ವಾಮಿ ಮಂಗಳೂರು, ಶಾಂತಿಪ್ರಕಾಶ್, ಅರುಣ ದೂಪದಕಟ್ಟೆ, ಶಾಂತಿ ಅಶೋಕ್ ವಿಟ್ಲ, ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.
ಸಭೆಯಲ್ಲಿ ಷಣ್ಮುಗಂ ಮಂಗಳೂರು ಸ್ವಾಗತಿಸಿ, ಜಗದೀಶ ಪರ್ಕಳ ಪ್ರಸ್ತಾವಣೆಗೈದರು.ನಾರಾಯಣ ಬೋಂದೆಲ್ ಲೆಕ್ಕಪತ್ರ ಮಂಡಿಸಿದರು. ರಾಜೇಂದ್ರ ಕಿನ್ನಿಕಂಬಳ ವರದಿ ವಾಚಿಸಿದರು. ಗಣೇಶ ಬೋಯಾನ್ ಧನ್ಯವಾದಗೈದರು. ಚಂದ್ರಕಾಂತ್ ಮಂಗಳೂರು, ಸೆಲ್ವ ಕುಮಾರ್ ಬಲ್ಮಠ ಹಾಗೂ ವಿಜಯಾಕುಮಾರ್ ಪೆರ್ಡೂರ್ ಕಾರ್ಯಕ್ರಮ ನಿರೂಪಿಸಿದರು. ನೂತನವಾಗಿ ಆಯ್ಕೆಯಾದ ಎಲ್ಲಾ ಪಧಾದಿಕಾರಿಗಳನ್ನು ವೇದಿಕೆಯಲ್ಲಿ ಹೂ ನೀಡಿ  ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *